ಬಾಗಲಕೋಟೆ: ರಾಜ್ಯದಲ್ಲಿ ಪಿತೃ ಪಕ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಭವಿಷ್ಯ ನುಡಿದಿದ್ದಾರೆ.

 ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚಿಸುವ ಬಗ್ಗೆ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಹೇಳುವೆ ಎಂದರು. 

ಸದ್ಯಕ್ಕೆ ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದು ಸುಲಭದ ಕೆಲಸವಲ್ಲ ಎಂದಷ್ಟೇ ತಿಳಿಸಿದರು.

ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಅನೇಕ ರೀತಿಯ ಗೊಂದಲಗಳು ಎದುರಾಗಿ ಸದ್ಯ ಪರಿಸ್ಥಿತಿ ತಣ್ಣಗಾಗುತ್ತಿದ್ದು ಮತ್ತೊಮ್ಮೆ ಶಾಸಕರು ಅಧಿಕಾರ ಹಿಡಿಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.