ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದ ಕಾನೂನು ಸಮರದ ನಂತ್ರ ಕೊನೆಗೂ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ನಿನ್ನ ಮೂಡಬಿದ್ರೆಯಲ್ಲಿ ವಿಜಯೋತ್ಸವ ಕಂಬಳ ನಡೆದಿತ್ತು. ಆದರೆ ಈ ಕಂಬಳದಲ್ಲೂ ಕೋಣಗಳನ್ನ ಹಿಂಸಿಸಲಾಗಿದೆ ಅಂತ ಪೇಟಾ ಪ್ರಾಣಿ ದಯಾ ಸಂಘ ಮತ್ತೆ ತಕರಾರು ತೆಗೆದಿದ್ದು, ನಾಳೆ ಸುಪ್ರೀಂ ಕೋರ್ಟ್​​ಗೆ ಸಾಕ್ಷ್ಯ ಸಲ್ಲಿಸೋದಾಗಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.

ಮಂಗಳೂರು (ನ.12): ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದ ಕಾನೂನು ಸಮರದ ನಂತ್ರ ಕೊನೆಗೂ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ನಿನ್ನ ಮೂಡಬಿದ್ರೆಯಲ್ಲಿ ವಿಜಯೋತ್ಸವ ಕಂಬಳ ನಡೆದಿತ್ತು. ಆದರೆ ಈ ಕಂಬಳದಲ್ಲೂ ಕೋಣಗಳನ್ನ ಹಿಂಸಿಸಲಾಗಿದೆ ಅಂತ ಪೇಟಾ ಪ್ರಾಣಿ ದಯಾ ಸಂಘ ಮತ್ತೆ ತಕರಾರು ತೆಗೆದಿದ್ದು, ನಾಳೆ ಸುಪ್ರೀಂ ಕೋರ್ಟ್​​ಗೆ ಸಾಕ್ಷ್ಯ ಸಲ್ಲಿಸೋದಾಗಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.

ನಿನ್ನೆ ನಡೆದ ಕಂಬಳದಲ್ಲಿ ರಹಸ್ಯವಾಗಿ ಪೇಟಾದ ಕಾರ್ಯಕರ್ತರು ತೆಗೆದ ಫೋಟೋ ಮತ್ತು ವೀಡಿಯೋಗಳಲ್ಲಿ ಕಂಬಳದ ಕೋಣಗಳ ಮೇಲೆ ಹಿಂಸೆ ನಡೆದಿರೋದು ಸಾಬೀತಾಗಿದೆ ಎಂದು ಪೇಟಾ ಹೇಳಿದೆ. ಅಲ್ಲದೇ ಈ ಸಂಬಂಧ ಕೆಲ ಫೋಟೋಗಳನ್ನ ಪೇಟಾ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದೆ. ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಿನ್ನೆ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ಮೂಡಬಿದ್ರೆಯಲ್ಲಿ ಕಂಬಳ ವಿಜಯೋತ್ಸವ ನಡೆದಿತ್ತು. ಸದ್ಯ ಒಂದು ವಾರ ಕಂಬಳ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು, ರಾಜ್ಯ ಸರ್ಕಾರದ ವಿಧೇಯಕ ಮಂಡಿಸಿರೋ ಕಾರಣದಿಂಧ ಕಂಬಳಕ್ಕೆ ಅವಕಾಶ ಸಿಕ್ಕಿದೆ. ಆದ್ರೆ ಯಾವುದೇ ಕಾರಣಕ್ಕೂ ಮನೋರಂಜನೆಯ ಹೆಸ್ರಿನಲ್ಲಿ ಹಿಂಸೆ ಸಲ್ಲದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಆದ್ರೆ ನಿನ್ನೆ ನಡೆದ ಕಂಬಳದಲ್ಲಿ ಹಿಂಸೆ ನಡೆದಿದೆ ಅಂತ ಆರೋಪಿಸಿರೋ ಪೇಟಾ ಈ ಸಂಬಂಧ ಧಾಖಲೆಗಳನ್ನ ಬಹಿರಂಗ ಪಡಿಸಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸೋದಾಗಿ ಹೇಳಿದೆ. ಹೀಗಾಗಿ ಮತ್ತೆ ಕಂಬಳಕ್ಕೆ ಆತಂಕ ಎದುರಾಗಿದ್ದು, ಪೇಟಾದ ತಕರಾರು ಮತ್ತೆ ಎದುರಾಗಿದೆ.