ಭುವನೇಶ್ವರ[ಜು.30]: ರಸಗುಲ್ಲಾ ತವರು ಯಾವುದು ಎಂಬ ಹೋರಾಟದಲ್ಲಿ 2 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಎದುರು ಸೋತಿದ್ದ ಒಡಿಶಾಕ್ಕೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ.

ಒಡಿಶಾ ಅತ್ಯಂತ ಜನಪ್ರಿಯ ಸಿಹಿ ತಿನಿಸಾದ ‘ಒಡಿಶಾ ರಸಗುಲ್ಲಾ’ಗೆ ಇದೀಗ ಭೌಗೋಳಿಕ ಸೂಚ್ಯಂಕದ ಸ್ಥಾನಮಾನ ನೀಡಲಾಗಿದೆ. ಚೆನ್ನೈನಲ್ಲಿರುವ ಭೌಗೋಳಿಕ ಸೂಚ್ಯಂಕದ ರಿಜಿಸ್ಟ್ರಾರ್‌, ಸರಕುಗಳ ಭೋಗೋಳಿಕ ಸೂಚ್ಯಂಕಗಳ ಕಾಯ್ದೆ(ನೋಂದಣಿ ಹಾಗೂ ರಕ್ಷಣೆ)ಅಡಿ-1999 ‘ಒಡಿಶಾದ ರಸಗುಲ್ಲಾ’ ಎಂಬ ಪ್ರಮಾಣ ಪತ್ರವನ್ನು ನೀಡಿದೆ.

2017ರಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾಗಿರುವ ಬಂಗ್ಲಾರ್‌ ರಸಗುಲ್ಲಾಗೆ ಕೂಡಾ ಭೌಗೋಳಿಕ ಸೂಚ್ಯಂಕದ ಸ್ಥಾನಮಾನ ನೀಡಲಾಗಿತ್ತು.