ಛತ್ತೀಸ್‌ಗಢದ ಸುಕ್ಮಾದಲ್ಲಿ ಮಾವೋವಾದಿಗಳು 25 ಸಿಆರ್‌ಪಿಎಫ್‌ ಯೋಧರ ಬಲಿಪಡೆಯುತ್ತಿದ್ದಂ ತೆಯೇ, ದೇಶಾದ್ಯಂತ ಆಕ್ರೋಶದ ಕಟ್ಟೆಯೊಡೆಯಿತು. ಯೋಧರು ಕೂಡ ಸೇಡಿಗಾಗಿ ಶಪಥಗೈದರು. ಅಂತೆಯೇ ಸಿಆರ್‌ಪಿಎಫ್‌ ಯೋಧರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿ ಯೋವೊಂದನ್ನು ಹಾಕಿದ್ದಾರೆ.

ನವದೆಹಲಿ(ಎ.30): ಛತ್ತೀಸ್‌ಗಢದ ಸುಕ್ಮಾದಲ್ಲಿ ಮಾವೋವಾದಿಗಳು 25 ಸಿಆರ್‌ಪಿಎಫ್‌ ಯೋಧರ ಬಲಿಪಡೆಯುತ್ತಿದ್ದಂ ತೆಯೇ, ದೇಶಾದ್ಯಂತ ಆಕ್ರೋಶದ ಕಟ್ಟೆಯೊಡೆಯಿತು. ಯೋಧರು ಕೂಡ ಸೇಡಿಗಾಗಿ ಶಪಥಗೈದರು. ಅಂತೆಯೇ ಸಿಆರ್‌ಪಿಎಫ್‌ ಯೋಧರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿ ಯೋವೊಂದನ್ನು ಹಾಕಿದ್ದಾರೆ.

ಅದರಲ್ಲಿ ಅವರು ‘ಇನ್ನು ತಾಳ್ಮೆ ಸಾಕು. ರಕ್ತಕ್ಕೆ ರಕ್ತ.. ಸೇಡಿಗೆ ಸೇಡು ಬೇಕು' ಎಂದು ಸಹ ಯೋಧರ ಸಾವಿಗೆ ಮಮ್ಮಲ ಮರುಗುತ್ತ... ಕಣ್ಣೀರು ಹಾಕುತ್ತ.. ಆಡಿರುವ ಮಾತುಗಳು ಎಂಥವರ ಮನಸ್ಸನ್ನೂ ಕರಗಿಸುತ್ತವೆ.
ಇದಲ್ಲದೆ, ‘ಸರ್ಕಾರಗಳು ಪ್ರತಿ ದಾಳಿ ಸಂಭವಿಸಿದಾಗ ಕೇವಲ ಪ್ರತೀ ಕಾರದ ಮಾತು ಆಡುತ್ತವೆಯೇ ವಿನಾ ಕೊನೆಯ ಹೋರಾಟಕ್ಕೆ ಕೈಹಾಕುವು ದಿಲ್ಲ. ನಕ್ಸಲೀಯರ ಉಪಟಳಕ್ಕೆ ಶಾಶ್ವತ ಕೊನೆ ಹಾಡುವುದಿಲ್ಲ. ಬದಲಾಗಿ ಅಷ್ಟಿಷ್ಟುಪರಿಹಾರ ಕೊಟ್ಟು ಕೈತೊಳೆದು ಕೊಳ್ಳುತ್ತವೆ. ಯಾರೋ ವ್ಯಕ್ತಿ 1 ಕೋಟಿ ಕೊಟ್ಟು ಸೆಲೆಬ್ರಿಟಿ ಆಗುತ್ತಾನೆ' ಎಂದೂ ಯೋಧ ಕಿಡಿಕಾರಿದ್ದಾನೆ. ವಿಡಿಯೋ ಈಗ ವೈರಲ್‌ ಆಗಿದೆ.

ಯೋಧನ ಆಕ್ರೋಶದ ನುಡಿಗಳು: ‘ಇದು ಅತಿಯಾಯ್ತ. ಇನ್ನು ತಡೆಯಬಾರದು. ನಮ್ಮ ಮನೆ ಮಠ ಬಿಟ್ಟು ದೂರದ ಊರುಗಳಿಂದ ಬಂದು ಕಾಡಿನಲ್ಲಿ ನಿಯೋ ಜಿತರಾಗುತ್ತೇವೆ. ಹಲವಾರು ಬಾರಿ ಊಟವೇ ಸಿಗುವುದಿಲ್ಲ. ಮನೆಯವರೊಂದಿಗೆ ಮಾತನಾಡಬೇಕು ಎಂದರೆ ನೆಟ್‌ವರ್ಕ್ ಕೂಡ ಇರುವುದಿಲ್ಲ. ನಾವೇಕೆ ಅಲ್ಲಿರುತ್ತೇವೆ? ಅಪ್ಪ-ಅಮ್ಮನ ಖುಷಿಗಾಗಿ, ಹೆಂಡತಿ-ಮಕ್ಕಳ ಖುಷಿಗಾಗಿ. ಆದರೆ, ನಮ್ಮ ಹೋರಾಟಕೆ ತಕ್ಕ ಪ್ರತಿಫಲ ಸಿಗಲ್ಲ. ದಾಳಿ ಒಮ್ಮೆ ಆಯಿತೆಂದರೆ 4 ದಿನ ಚರ್ಚೆ ನಡೆಯುತ್ತದೆ. ನಂತರ ಎಲ್ಲರೂ ಸುಮ್ಮನಾಗಿಬಿಡುತ್ತಾರೆ.' ‘ಆದರೆ ಇನ್ನು ಇದು ಸಾಧ್ಯವಿಲ್ಲ. ನಾವಿನ್ನು ಶಪಥ ಮಾಡುತ್ತೇವೆ. 2-3 ವರ್ಷದ ಮಟ್ಟಿಗೆ ನಾವು ಕಾಡಿನಲ್ಲಿರಲ್ಲ. ಎಲ್ಲಿಯವರೆಗೆ ನಕ್ಸಲರ ಸಂಹಾರ ಆಗುವುದಿಲ್ಲವೋ ಅಲ್ಲಿಯವರೆಗೂ ಕಾಡು ಬಿಟ್ಟು ಬರಲ್ಲ. ನಮಗೆ ರಕ್ತದ ಬದಲಾಗಿ ರಕ್ತವೇ ಬೇಕು. ಪರಿಹಾರ ಬೇಡ. ಹುತಾತ್ಮರಾದಾಗ ಯಾರೋ ಕೋಟಿ ಕೊಟ್ಟರು ಎಂದರೆ ಸೆಲೆಬ್ರಿಟಿ ಆಗ್ತಾರೆ. ಯಾವ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೋ ಅವಳ ದುಃಖ ಕೇಳೋರಾರು?

Scroll to load tweet…