ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ರೋಹ್ಟಕ್ ಸುನಾರಿಯಾ ಜೈಲಿನಲ್ಲಿ  5 ದಿನಗಳನ್ನು ಕಳೆದಿದ್ದು ಅಲ್ಲಿ ಇರಲಿಕ್ಕಾಗದೇ ಕಣ್ಣೀರು ಹಾಕಿದ್ದಾರೆ. 'ನನ್ನನ್ನು ಗಲ್ಲಿಗೆ ಹಾಕಿ, ನನಗೆ ಬದುಕಲು ಇಷ್ಟವಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.

ನವದೆಹಲಿ (ಸೆ.01): ಅತ್ಯಾಚಾರ ಆರೋಪದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ರೋಹ್ಟಕ್ ಸುನಾರಿಯಾ ಜೈಲಿನಲ್ಲಿ 5 ದಿನಗಳನ್ನು ಕಳೆದಿದ್ದು ಅಲ್ಲಿ ಇರಲಿಕ್ಕಾಗದೇ ಕಣ್ಣೀರು ಹಾಕಿದ್ದಾರೆ. 'ನನ್ನನ್ನು ಗಲ್ಲಿಗೆ ಹಾಕಿ, ನನಗೆ ಬದುಕಲು ಇಷ್ಟವಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.

ಅತ್ಯಾಚಾರ ಆರೋಪದಡಿಯಲ್ಲಿ ಗುರ್ಮೀತ್ ರಾಮ್ ರಹೀಮ್’ಗೆ ಆ.28 ರಂದು ಸಿಬಿಐ ನ್ಯಾಯಾಲಯ 20 ವರ್ಷಗಳ ಜೈಲುಶಿಕ್ಷೆ ಹಾಗೂ 30 ಲಕ್ಷ ದಂಡವನ್ನು ವಿಧಿಸಿತ್ತು. ಶಿಕ್ಷೆ ಪ್ರಕಟವಾದ ಬಳಿಕ ಗುರ್ಮೀತ್ ಸಿಂಗ್ ಕೋರ್ಟ್ ಆವರಣದಲ್ಲಿಯೇ ಗಳಗಳನೇ ಅತ್ತರು.

ಗುರ್ಮೀತ್ ಸಿಂಗ್ ಜೊತೆ ಐದು ದಿನಗಳ ಕಾಲ ಜೊತೆಗಿದ್ದು ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಸ್ವದೇಶ್ ಕಿರಾದ್ ಹೇಳುವ ಪ್ರಕಾರ; ಬಾಬಾರವರು ಇಡೀ ರಾತ್ರಿ ನಿದ್ದೆ ಮಾಡಿಲ್ಲ. ಓ ದೇವರೇ ನಾನೇನು ತಪ್ಪು ಮಾಡಿದ್ದೇನೆ ಎಂದು ಗುನುಗುನಿಸುತ್ತಿದ್ದರು. ಅವರಿಗೆ ವಿಶೇಷ ಆತಿಥ್ಯವನ್ನೇನು ನೀಡಿಲ್ಲ. ಅವರು 5 ದಿನಗಳ ಕಾಲ ನನ್ನು ತಿಂದಿಲ್ಲ, ಕೇವಲ ಹಾಲು,ಟೀ ಮತ್ತು ಬಿಸ್ಕೇಟ್’ನಲ್ಲಿಯೇ ಇದ್ದಾರೆ ಎಂದು ಹೇಳಿದ್ದಾರೆ.