Asianet Suvarna News Asianet Suvarna News

ದು:ಸ್ವಪ್ನದ ಮದುವೆ: ವರ್ಷದ ನಂತರ ತಿಳಿಯಿತು ಗಂಡ ಸಲಿಂಗಿಯೆಂದು!

ಪತಿರಾಯ ಸಲಿಂಗಿ ಎಂಬ ಅಂಶವನ್ನು ಸಂಬಂಧಿಕರ ಮೂಲಕ ತಿಳಿದ ಮಹಿಳೆಯೀಗ ಪತಿಯಿಂದ ದೂರವಾಗಲು ನಿರ್ಧರಿಸಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಿಹಾರ ಮೂಲದ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ ರಾಧಾಮಣಿ ಅವರು ಆಸ್ಪ್ರೇಲಿಯಾದಲ್ಲಿ ನೆಲೆಸಿರುವ ಕಿಶೋರ್‌ ಎಂಬುವರಿಂದ (ಹೆಸರು ಬದಲಿಸಲಾಗಿದೆ)ವಂಚನೆಗೊಳಗಾಗಿದ್ದಾರೆ.

After One Year Wife Comes to Know that Husband is a Gay

ಬೆಂಗಳೂರು: ವಿವಾಹ ವಾರ್ಷಿಕೋತ್ಸವ ಮುಗಿದರೂ ದಾಂಪತ್ಯ ಸುಖ ಹಂಚಿಕೊಳ್ಳಲು ನಿರಾಕರಿಸಿದ ಪತಿಯ ದೌರ್ಬಲ್ಯವನ್ನು ವರ್ಷದ ಬಳಿಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಹಿಳೆಯೊಬ್ಬರು ವೈವಾಹಿಕ ಸಂಬಂಧ ಕಡಿದುಕೊಳ್ಳಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿವಾಹ ವಾರ್ಷಿಕೋತ್ಸವ ಮುಗಿದರೂ ದಾಂಪತ್ಯ ಸುಖ ಹಂಚಿಕೊಳ್ಳಲು ನಿರಾಕರಿಸಿದ ಪತಿಯ ದೌರ್ಬಲ್ಯವನ್ನು ವರ್ಷದ ಬಳಿಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಹಿಳೆಯೊಬ್ಬರು ವೈವಾಹಿಕ ಸಂಬಂಧ ಕಡಿದುಕೊಳ್ಳಲು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಪತಿರಾಯ ಸಲಿಂಗಿ ಎಂಬ ಅಂಶವನ್ನು ಸಂಬಂಧಿಕರ ಮೂಲಕ ತಿಳಿದ ಮಹಿಳೆಯೀಗ ಪತಿಯಿಂದ ದೂರವಾಗಲು ನಿರ್ಧರಿಸಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಿಹಾರ ಮೂಲದ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ ರಾಧಾಮಣಿ ಅವರು ಆಸ್ಪ್ರೇಲಿಯಾದಲ್ಲಿ ನೆಲೆಸಿರುವ ಕಿಶೋರ್‌ ಎಂಬುವರಿಂದ (ಹೆಸರು ಬದಲಿಸಲಾಗಿದೆ)ವಂಚನೆಗೊಳಗಾಗಿದ್ದಾರೆ.

ಆಸ್ಪ್ರೇಲಿಯಾದಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುಂಬೈ ಮೂಲದ ಕಿಶೋರ್‌ನೊಂದಿಗೆ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ ರಾಧಾಮಣಿಗೆ ಆನ್‌ಲೈನ್‌ ಮೂಲಕ ಸ್ನೇಹ ಬೆಳೆದಿತ್ತು. ಅದು ಪ್ರೇಮಕ್ಕೆ ತಿರುಗಿ ಪೋಷಕರ ಒಪ್ಪಿಗೆಯ ಮೇರೆಗೆ 2016ರಲ್ಲಿ ವಿವಾಹವೂ ನಡೆಯಿತು. ಆದರೆ, ಮೊದಲ ರಾತ್ರಿ ಕಾರ್ಯಕ್ರಮ ಮುಂದೂಡುವಂತೆ ಪದೇ ಪದೇ ಯುವಕ ಕೇಳುತ್ತಿದ್ದ. ಇದರಿಂದ ನವ ವಿವಾಹಿತೆ ಆಘಾತಕ್ಕೆ ಒಳಗಾಗಿದ್ದಳು. ಆದರೂ, ಒಲ್ಲದ ಮನಸ್ಸಿನಿಂದ ಸಹಕರಿಸಿದ್ದಳು. ಒಂದು ವಾರದ ಕಾಲ ಇದೇ ರೀತಿ ನಡೆದುಕೊಂಡ ಕಿಶೋರ್‌ ಮತ್ತೆ ಆಸ್ಪ್ರೇಲಿಯಾಕ್ಕೆ ತೆರಳಿದ್ದ.

ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ನವ ವಿವಾಹಿತೆ ರಾಧಾಮಣಿ ಮತ್ತೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಹೋಗಲಾರಂಭಿಸಿದಳು. ಬಳಿಕ ಫೋನ್‌ ಮೂಲಕ ಕಿಶೋರ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಕುರಿತು ಕಿಶೋರ್‌ ಪೋಷಕರನ್ನು ಕೇಳಿದರೆ ಕೆಲಸದ ಒತ್ತಡದಿಂದ ಪ್ರತಿಕ್ರಿಯಿಸಿಲ್ಲ, ಸ್ವಲ್ಪ ದಿನ ತಾಳ್ಮೆ ವಹಿಸು ಎಂದು ಹೇಳಿದರು. ಇದರಿಂದ ಸಂಶಯಕ್ಕೆ ಬಿದ್ದ ರಾಧಾಮಣಿ, ಕಿಶೋರ್‌ನ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿದಾಗ ಆತ ಸಲಿಂಗಿ ಎಂಬುದು ತಿಳಿಯಿತು. ಇದರಿಂದ ಆಘಾತಗೊಂಡ ಆಕೆ, ಮತ್ತೆ ಮತ್ತೆ ಕಿಶೋರ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

Follow Us:
Download App:
  • android
  • ios