ಅಮೇರಿಕಾ ಅಧ್ಯಕ್ಷ ಸ್ಥಾನದಿಂದ ಒಬಾಮಾ ನಿರ್ಗಮನದ ನಂತರ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದ ನಾಯಕ ಎನ್ನುವ ಪಟ್ಟ ಅಲಂಕರಿಸಿದ್ದಾರೆ.
ನವದೆಹಲಿ (ಜ.20): ಅಮೇರಿಕಾ ಅಧ್ಯಕ್ಷ ಸ್ಥಾನದಿಂದ ಒಬಾಮಾ ನಿರ್ಗಮನದ ನಂತರ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದ ನಾಯಕ ಎನ್ನುವ ಪಟ್ಟ ಅಲಂಕರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಯುಟ್ಯೂಬ್ ಮತ್ತು ಗೂಗಲ್+ ನಲ್ಲಿ ಮೋದಿ ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಆಧುನಿಕ ಮತ್ತು ಡಿಜಿಟಲ್ ಸಂವಹನವನ್ನು ಉತ್ತೇಜಿಸಿದವರಲ್ಲಿ ನರೇಂದ್ರ ಮೋದಿ ಮೊದಲ ಪ್ರಧಾನಿಯಾಗಿದ್ದಾರೆ. ಆಡಳಿತದಲ್ಲಿ ತಂತ್ರಜ್ಞಾನವನ್ನು ಬಳಸುತ್ತಾ ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ ಮೋದಿಯವರು ಟ್ವಿಟರ್ ನಲ್ಲಿ 26.5 ಮಿಲಿಯನ್, ಫೇಸ್ ಬುಕ್ ನಲ್ಲಿ 39.2 ಮಿಲಿಯನ್, ಗೂಗಲ್ + ನಲ್ಲಿ 3.2 ಮಿಲಿಯನ್, ಯುಟ್ಯೂಬ್ ನಲ್ಲಿ 5,91,000 ಮಿಲಿಯನ್, ಇನ್ಸ್ಟಾಗ್ರಾಂನಲ್ಲಿ 5.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರ ಮೊಬೈಲ್ ಆ್ಯಪ್ ನ್ನು 10 ಮಿಲಿಯನ್ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
