ಮಾಜಿ ಸಂಸದೆ ರಮ್ಯಾ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸು ಬರುವ ಮನಸ್ಸು ಮಾಡಿದ್ದಾರೆ. ಲೋಕಸಭೆ ಚುನಾವಣೆ ನಂತರ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಆಗುವ ಸಾಧ್ಯತೆ ಇದೆ. ಖುದ್ದು ರಮ್ಯಾ ಅವರೇ ಈ ಸಾಧ್ಯತೆಯ ಕುರಿತು ಮಾತನಾಡಿದ್ದಾರೆ.
ಬೆಂಗಳೂರು : ಮಾಜಿ ಸಂಸದೆ ರಮ್ಯಾ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸು ಬರುವ ಮನಸ್ಸು ಮಾಡಿದ್ದಾರೆ. ಲೋಕಸಭೆ ಚುನಾವಣೆ ನಂತರ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಆಗುವ ಸಾಧ್ಯತೆ ಇದೆ. ಖುದ್ದು ರಮ್ಯಾ ಅವರೇ ಈ ಸಾಧ್ಯತೆಯ ಕುರಿತು ಮಾತನಾಡಿದ್ದಾರೆ.
ರಮ್ಯಾ ಅವರು ಈ ವಿಚಾರ ಸ್ಪಷ್ಟಪಡಿಸಿದ್ದು ಟ್ವೀಟರ್‌ನಲ್ಲಿ. ನಟ ರಕ್ಷಿತ್ ಶೆಟ್ಟಿಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಅನ್ನು ರಮ್ಯಾ ಮೆಚ್ಚಿ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ಧನ್ಯವಾದ ಸಲ್ಲಿಸುವ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ, ‘ನೀವು ಯಾವತ್ತೂ ಸ್ಯಾಂಡಲ್‌ವುಡ್ ಕ್ವೀನ್, ನಿಮ್ಮನ್ನು ಮತ್ತೆ ಬೆಳ್ಳಿ ತೆರೆಯಲ್ಲಿ ನೋಡಲು ಇಚ್ಛಿಸುತ್ತೇನೆ’ ಎಂದಿದ್ದರು.
ಅಚ್ಚರಿ ಎಂಬಂತೆ ಅದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ‘2019ರ ನಂತರ’ ಎಂದಿದ್ದಾರೆ. ಈ ಇಬ್ಬರ ಟ್ವೀಟ್‌ಗಳನ್ನು ಗಮನಿಸಿದ ಟ್ವೀಟರ್ ಜಗತ್ತು ಚಿತ್ರರಂಗಕ್ಕೆ ರಮ್ಯಾ ಪುನರಾಗಮನ ಕುರಿತು ಚರ್ಚೆಯಲ್ಲಿ ತೊಡಗಿದೆ. ಕನ್ನಡ ಚಿತ್ರರಂಗ ಮತ್ತು ರಾಜಕಾರಣ ಎರಡೂ ಕ್ಷೇತ್ರದಲ್ಲಿ ಈ ಸಂಗತಿ ಭಾರಿ ಚರ್ಚೆಯಾಗುವುದು ನಿಶ್ಚಿತ.
2013ರ ಲೋಕಸಭೆ ಉಪಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದ ರಮ್ಯಾ, ಆನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಸಕ್ರಿಯವಾಗಿ ಕಾಂಗ್ರೆಸ್ಸಿನ ಜವಾಬ್ದಾರಿ ಹೊತ್ತುಕೊಂಡ ಬಳಿಕ ಅವರು ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ.
