ಸಿನಿಮೀಯ ಶೈಲಿಯಲ್ಲಿ  ಪರಾರಿಯಾಗಿರುವ ಉಗ್ರರು ಕಂಬಳಿಯನ್ನು ಹಗ್ಗದಂತೆ ಬಳಸಿ ಪರಾರಿಯಾಗಿದ್ದಾರೆ.  ಅಲ್ಲದೆ ಈ ಸಂದರ್ಭದಲ್ಲಿ ಒರ್ವ ಗಾರ್ಡ್​'ನನ್ನು ಕೊಲೆ ಮಾಡಿರುವ ಉಗ್ರರು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯನ್ನು ಸ್ಪಷ್ಟಪಡಿಸಿರುವ ಗೃಹಸಚಿವ ಭೂಪೇಂದ್ರ ಸಿಂಗ್ ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ಎಸ್ ಪಿ ಅರವಿಂದ್ ಸಕ್ಸೇನಾ ಅವರಿಗೆ ಸೂಚಿಸಿದ್ದಾರೆ. ಸದ್ಯ ಪೊಲೀಸರು ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಭೋಪಾಲ್(ಅ.31): ಮಧ್ಯಪ್ರದೇಶದ ಭೋಪಾಲ್ ಸೆಂಟ್ರಲ್ ಜೈಲಿನಿಂದ 8 ಉಗ್ರರು ಪರಾರಿಯಾದ ಘಟನೆ ನಡೆದಿದೆ. ನಿಷೇದಿತ ಸಿಮಿ ಸಂಘಟನೆಯ 8 ಉಗ್ರರು ತಡತಾತ್ರಿ 2 ಗಂಟೆಯಲ್ಲಿ ಪರಾರಿಯಾಗಿದ್ದು , ಪರಾರಿಯಾಗಲು ಕಂಬಳಿ ಮತ್ತು ಬೆಡ್ ಶೀಟ್ ಬಳಸಿದ್ದಾರೆ.

ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ಉಗ್ರರು ಕಂಬಳಿಯನ್ನು ಹಗ್ಗದಂತೆ ಬಳಸಿ ಪರಾರಿಯಾಗಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಒರ್ವ ಗಾರ್ಡ್​'ನನ್ನು ಕೊಲೆ ಮಾಡಿರುವ ಉಗ್ರರು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಿದ್ದಾರೆ.

ಘಟನೆಯನ್ನು ಸ್ಪಷ್ಟಪಡಿಸಿರುವ ಗೃಹಸಚಿವ ಭೂಪೇಂದ್ರ ಸಿಂಗ್ ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ಎಸ್ ಪಿ ಅರವಿಂದ್ ಸಕ್ಸೇನಾ ಅವರಿಗೆ ಸೂಚಿಸಿದ್ದಾರೆ. ಸದ್ಯ ಪೊಲೀಸರು ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.