ಚೆನ್ನೈ[ಜ.28]: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ವಾಸಿಸುತ್ತಿದ್ದ ಪೋಯೆಸ್‌ ಗಾರ್ಡನ್‌ ಮನೆಯನ್ನು ಐಟಿ ಅಧಿಕಾರಿಗಳು ತಮ್ಮ ಜಪ್ತಿ ಮಾಡಿದ್ದಾರೆ ಎಂಬ ಅಚ್ಚರಿಯ ವರದಿಯ ಬೆನ್ನಲ್ಲೇ, ಇದಕ್ಕೆ ಕಾರಣವಾದ ಅಂಶಗಳು ಇದೀಗ ಬಹಿರಂಗಗೊಂಡಿದೆ.

ಜಯಾ ಜೀವಂತ ಇದ್ದಾಗ ಕೊಡನಾಡು ಎಸ್ಟೇಟ್‌ ಸೇರಿದಂತೆ ಹಲವು ಆಸ್ತಿ ಖರೀದಿ ಮಾಡಿದ್ದರು. ಇವುಗಳಲ್ಲಿ ಹಲವು ವಾಣಿಜ್ಯ ಕಟ್ಟಡಗಳು ಸೇರಿದ್ದವು. ಇವುಗಳನ್ನು ಬಾಡಿಗೆಗೆ ಪಡೆದುಕೊಂಡವರು, ಜಯಾ ಸಾವಿನ ಬಳಿಕವೂ, ಜಯಾ ಅವರ ಬ್ಯಾಂಕ್‌ ಖಾತೆಗೆ ತಾವು ನೀಡಬೇಕಾಗಿ ಬರುವ ಹಣವನ್ನು ಪಾವತಿ ಮಾಡುತ್ತಲೇ ಇದ್ದಾರೆ. ಆದರೆ ಈ ಹಣಕ್ಕೆ ಪಾವತಿ ಮಾಡಬೇಕಾದ ತೆರಿಗೆಯನ್ನು ಯಾರೂ ಪಾವತಿ ಮಾಡಿರಲಿಲ್ಲ.

ಈ ಆದಾಯಕ್ಕೆ ತೆರಿಗೆ ಪಾವತಿಸುವಂತೆ ಹಲವು ಬಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರೂ, ಯಾರೂ ಕೂಡಾ ಆ ವಿಷಯದ ಬಗ್ಗೆ ತಲೆಹಾಕಲು ಹೋಗಿರಲಿಲ್ಲ. ಹೀಗಾಗಿ ಜಯಾಗೆ ಸೇರಿದ ಮೂರು ಆಸ್ತಿಗಳನ್ನು ಜಪ್ತಿ ಹಾಕಿಕೊಳ್ಳಲಾಗಿತ್ತು. ತೆರಿಗೆ ಪಾವತಿ ಮಾಡದ ಹೊರತೂ ಈ ಆಸ್ತಿಗಳನ್ನು ಯಾರೂ ಮಾರುವಂತಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.