ಹಣಕಾಸು ನೀತಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕು ದರ ಕಡಿತ ಮಾಡಿಲ್ಲ ನಿಜ. ಆದರೂ ಬ್ಯಾಂಕುಗಳು ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತವಾಗುವ ಎಲ್ಲಾ ಸಾಧ್ಯತೆಗಳಿವೆ. ದಿನನಿತ್ಯದ ವ್ಯವಹಾರದಲ್ಲಿ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡಬೇಕಾದ ಹೆಚ್ಚುವರಿ ನಗದು ಮೀಸಲು ಅನುಪಾತದ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿರುವುದು ಇದಕ್ಕೇ ಕಾರಣ.

ಬಡವರು ಮತ್ತು ಮಧ್ಯಮವರ್ಗದ ಜನರಿಗೆ ಮನೆ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಗಗನಕ್ಕೇರಿದ್ದ ಮನೆಗಳ ಬೇಲೆ ಮತ್ತು ದುಬಾರಿ ಗೃಹ ಸಾಲದಿಂದ ಈ ಆಸೆ ಈಡೇರೋದು ಭಾರೀ ಕಷ್ಟವಾಗಿತ್ತು. ಕೇಂದ್ರ ಸರ್ಕಾರದ ನೋಟ್​ಬ್ಯಾನ್ ಎಫೆಕ್ಟ್​ನಿಂದ ಈಗ ಗೃಹ ಸಾಲ ಅಗ್ಗವಾಗ್ತಿದೆ ಜೊತೆಗೆ ಮನೆಗಳ ರೇಟು ಕಡಿಮೆ ಆಗಿದ್ದು, ಬಡಜನರ ಕನಸು ನನಸಾಗ್ತಿದೆ.

ನೋಟ್​ಬ್ಯಾನ್​ ನಂತರ ಬ್ಯಾಂಕ್​ಗಳಿಗೆ ಅಗಾಧ ಪ್ರಮಾಣದಲ್ಲಿ ಹಣ ಹರಿದುಬಂದಿದೆ. ಬ್ಯಾಂಕ್​ಗಳಲ್ಲಿ ಡೆಪಾಸಿಟ್ ಹೆಚ್ಚಾಗ್ತಿದಂತೆ ಠೇವಣಿಗಳಿಗೆ ಕೊಡುತ್ತಿದ್ದ ಬಡ್ಡಿ ದರದಲ್ಲಿ ಬ್ಯಾಂಕ್​ಗಳು ಭಾರೀ ಇಳಿಕೆ ಮಾಡಿವೆ.. ಹೀಗಾಗಿ ಸದ್ಯದಲ್ಲೇ ಬ್ಯಾಂಕ್​ಗಳು ಕೊಡುವ ಸಾಲಗಳ ಬಡ್ಡಿದರವೂ ಇಳಿಕೆಯಾಗಲಿದೆ.

ಹಣಕಾಸು ನೀತಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕು ದರ ಕಡಿತ ಮಾಡಿಲ್ಲ ನಿಜ. ಆದರೂ ಬ್ಯಾಂಕುಗಳು ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತವಾಗುವ ಎಲ್ಲಾ ಸಾಧ್ಯತೆಗಳಿವೆ. ದಿನನಿತ್ಯದ ವ್ಯವಹಾರದಲ್ಲಿ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡಬೇಕಾದ ಹೆಚ್ಚುವರಿ ನಗದು ಮೀಸಲು ಅನುಪಾತದ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿರುವುದು ಇದಕ್ಕೇ ಕಾರಣ.

ಬಾಂಡ್‌ಗಳು ಹೆಚ್ಚಿನ ಲಾಭ ತಂದುಕೊಟ್ಟಿರುವುದರ ಹೊರತಾಗಿಯೂ ಕಳೆದ ಹಣಕಾಸು ನೀತಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ದರ ಕಡಿತಕ್ಕೆ ಮುಂದಾಗಿಲ್ಲ. ಹಾಗೆಂದು ಗೃಹ ಸಾಲ ಆಕಾಂಕ್ಷಿಗಳು ನಿರಾಶರಾಗಬೇಕಾಗಿಲ್ಲ. ಬ್ಯಾಂಕುಗಳಲ್ಲಿ ನಗದು ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಆರ್‌ಬಿಐ ಶೇ. 100 ಹೆಚ್ಚುವರಿ ನಗದು ಮೀಸಲು ಅನುಪಾತವನ್ನು ಹಿಂದಕ್ಕೆ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ಬ್ಯಾಂಕುಗಳಿಗೆ ಹರಿದು ಬಂದ ಠೇವಣಿ ಮೇಲಿನ ಬಡ್ಡಿ ಹೊರೆ ಕಡಿಮೆಯಾಗಲಿದ್ದು. ಇದು ಸಹಜವಾಗಿಯೇ ಬ್ಯಾಂಕುಗಳು ಗೃಹ ಸಾಲದ ಮೇಲಿನ ಬಡ್ಡಿ ಕಡಿತಕ್ಕೆ ಅವಕಾಶ ಮಾಡಿಕೊಡಲಿದೆ.

ಬಡ್ಡಿ ದರ ಕಡಿತ ಶುರು

ಹಲವು ಬ್ಯಾಂಕುಗಳಲ್ಲಿ ಕಡಿಮೆಯಾಗಿದ ಬಡ್ಡಿದರ

ಎಚ್‌ಡಿಎಫ್‌ಸಿ, ಬ್ಯಾಂಕ್‌ ಆಫ್‌ ಬರೋಡಾ,

ಬ್ಯಾಂಕ್‌ ಆಫ್‌ ಇಂಡಿಯಾ, ದೇನಾ ಬ್ಯಾಂಕ್‌ ಬಡ್ಡಿ

ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದಲೂ ಬಡ್ಡಿ ದರ ಇಳಿಕೆ

ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ ಬಡ್ಡಿ ದರದಲ್ಲೂ ಇಳಿಕೆ

ಕಳೆದ ವಾರದಿಂದೀಚೆಗೆ ಹಲವು ಬ್ಯಾಂಕುಗಳು ಆರ್‌ಬಿಐ ಹಣಕಾಸು ನೀತಿಗಾಗಿ ಕಾಯದೆ ಬಡ್ಡಿ ದರವನ್ನು ಕಡಿಮೆ ಮಾಡಿದ್ದವು. ಎಚ್‌ಡಿಎಫ್‌ಸಿ, ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ದೇನಾ ಬ್ಯಾಂಕ್‌ ಬಡ್ಡಿ ಇಳಿಸಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ ಒಂದು ವರ್ಷದ ಎಂಸಿಎಲ್‌ಆರ್‌ನ್ನು ಶೇ. 8.9ಕ್ಕೆ ಇಳಿಸಿದೆ. ಈ ಮೂಲಕ ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್‌ ಬಡ್ಡಿ ದರದಷ್ಟೇ ತನ್ನ ದರವನ್ನು ನಿಗದಿ ಮಾಡಿದೆ.

ನಗದು ಹರಿವು ಹೆಚ್ಚಳ

ದೊಡ್ಡ ಮುಖ ಬೆಲೆಯ ನೋಟು ರದ್ದತಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಬ್ಯಾಂಕುಗಳಿಗೆ ಹಣ ಹರಿದು ಬಂದಿದೆ. ಆದರೆ ಸಾಲ ಅದಕ್ಕೆ ತಕ್ಕಂತೆ ಹೊರ ಹೋಗುತ್ತಿಲ್ಲ. ಹೀಗಾಗಿ ಬಡ್ಡಿ ಕಡಿತಕ್ಕೆ ಬ್ಯಾಂಕುಗಳು ಮುಂದಾಗಲಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ರಿಟೇಲ್‌ ಸಾಲ ಪಡೆಯುವಿಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ಸದ್ಯದಲ್ಲೇ ಎಲ್ಲ ಬ್ಯಾಂಕ್​ಗಳ ಬಡ್ಡಿದರ ಕಡಿತಗೊಳ್ಳಲಿದೆ.

ಒಟ್ಟಿನಲ್ಲಿ ನೋಟ್​ಬ್ಯಾನ್ ಎಫೆಕ್ಟ್​ನಿಂದ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದ್ದು, ಬಡವರು ಮತ್ತು ಮಧ್ಯಮವರ್ಗದವರ ಮನೆ ಮಾಡುವ ಕನಸು ನನಸಾಗೋ ಕಾಲ ಹತ್ತಿರಬಂದಿದೆ.

ನ್ಯೂಸ್​ ಬ್ಯೂರೋ ಸುವರ್ಣನ್ಯೂಸ್