ಬೆಂಗಳೂರು[ಮಾ. 27]  ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೆಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಸವನಗುಡಿ, ಜಯನಗರದ ಹಲವು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉದ್ಯಮಿ ಸಿದೀಕ್ ಶೇಟ್ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ನಗರದ ಸೌತ್ ಎಂಡ್ ಸರ್ಕಲ್ ಬಳಿ ಇರೋ ಸಿದೀಕ್ ಸೆಟ್ ಮನೆ ಮೇಲೆ ದಾಳಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

5 ಜನ ಉದ್ಯಮಿಗಳ ಮೇಲೆ ಐಟಿ ದಾಳಿ ನಡೆದಿದೆ. ಸಿದ್ದಿಕ್ ಸೇಟ್ ಮೂಲತಃ ಜೊಳದ ವ್ಯಾಪಾರಿ ಎಂದು ಹೇಳಲಾಗಿದ್ದು ಮೂರು ಜನ ಅಧಿಕಾರಿಗಳ ತಂಡ ಅನೇಕ ಮಾಹಿತಿ ಕಲೆ ಹಾಕಿ  ತೆರಳಿದೆ.