ಫಾರ್ಚೂನರ್ ನಂತರ ಮತ್ತೊಂದು ಬೇಡಿಕೆಗೆ ಜಮೀರ್ ಪಟ್ಟು

First Published 4, Jul 2018, 5:50 PM IST
After Car Zameer wants Another Home
Highlights
  • ನಂಬರ್ 30 ನಿವೇಶನ ಬೇಕೆಂದಿರುವ ಜಮೀರ್
  • 2 ದಿನಗಳ ಹಿಂದಷ್ಟೆ ಫಾರ್ಚೂನರ್ ಕಾರು ಪಡೆದುಕೊಂಡಿದ್ದರು

ಬೆಂಗಳೂರು[ಜು.04]: ಎರಡು ದಿನಗಳ ಹಿಂದಷ್ಟೆ ಸಚಿವ ಜಮೀರ್ ಅಹಮದ್ ಖಾನ್  ಮಾಜಿ ಸಿಎಂ ಸಿದ್ದರಾಮಯ್ಯ ಬಳಸುತ್ತಿದ್ದ ಫಾರ್ಚೂನರ್ ಕಾರನ್ನು ಪಟ್ಟು ಹಿಡಿದು ಪಡೆದುಕೊಂಡಿದ್ದರು.

ಈಗ ಮತ್ತೊಂದು ಬೇಡಿಕೆ ಈಡೇರಿಕೆಗೆ ಜಮೀರ್ ಜಟಾಪಟಿಗೆ ಇಳಿದಿದ್ದಾರೆ. ಮಾಜಿ ಸಚಿವ ತನ್ವೀರ್ ಸೇಠ್ ವಾಸವಿದ್ದ ನಿವಾಸಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 
ಈಗಾಗಲೇ  ಜಯಮಹಲ್ ನಲ್ಲಿ ಜಮೀರ್ ಅವರಿಗೆ ನಿವೇಶನ ನೀಡಲಾಗಿದೆ. ಇದು ಬೇಡವೆಂದಿರುವ ಸಚಿವರು ಸ್ಯಾಂಕಿ ರಸ್ತೆಯಲ್ಲಿರುವ ನಂಬರ್ 30 ನಿವಾಸವನ್ನು ತಮಗೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಸ್ಯಾಂಕಿ ರಸ್ತೆಯಲ್ಲಿರುವ ನಂಬರ್ 30 ನಿವಾಸವನ್ನು ಮತ್ತೊಬ್ಬ ಸಚಿವ ಜಿ.ಟಿ. ದೇವೇಗೌಡ ಅವರಿಗೆ ಹಂಚಿಕೆ ಮಾಡಲಾಗಿದೆ. ಡಿಪಿಎಆರ್ ಮೂಲಕ ಆ ಮನೆಯನ್ನು ಪಡೆಯಲು ಜಮೀರ್ ಪ್ರಯತ್ನ ಮುಂದುವರಿಸಿದ್ದಾರೆ.

loader