ಕೊನೆಗೂ 16 ವರ್ಷಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಮಹತ್ವಕಾಂಕ್ಷೆಯ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ‘ಒಂದು ದೇಶ, ಒಂದು ತೆರಿಗೆ’ ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಸುಮಾರು 9 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಮತದಾನದ ಮೂಲಕ ಜಿಎಸ್​ಟಿ ಮಸೂದೆ ಅಂಗೀಕಾರಿಸಲಾಯ್ತು. ಇನ್ನು ರಾಜ್ಯಗಳಲ್ಲೂ ಐತಿಹಾಸಿಕ ಮಸೂದೆ ಪಾಸ್ ಆಗಬೇಕಿದೆ.  ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೆ ತರಲು ಕೇಂದ್ರ ಪ್ಲಾನ್ ಮಾಡಿದೆ.

ನವದೆಹಲಿ(ಮಾ.30): ಕೊನೆಗೂ 16 ವರ್ಷಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಮಹತ್ವಕಾಂಕ್ಷೆಯ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ‘ಒಂದು ದೇಶ, ಒಂದು ತೆರಿಗೆ’ ಸಂಬಂಧ ಮಹತ್ವ ಹೆಜ್ಜೆ ಇಟ್ಟಿದ್ದು, ಸುಮಾರು 9 ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ಮತದಾನದ ಮೂಲಕ ಜಿಎಸ್​ಟಿ ಮಸೂದೆ ಅಂಗೀಕಾರಿಸಲಾಯ್ತು. ಇನ್ನು ರಾಜ್ಯಗಳಲ್ಲೂ ಐತಿಹಾಸಿಕ ಮಸೂದೆ ಪಾಸ್ ಆಗಬೇಕಿದೆ. ಜುಲೈ 1ರಿಂದಲೇ ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೆ ತರಲು ಕೇಂದ್ರ ಪ್ಲಾನ್ ಮಾಡಿದೆ.

ಯಾವುದು ದುಬಾರಿ..?

ಲಕ್ಸುರಿ ಕಾರು, ತಂಪು ಪಾನೀಯ, ಮಿನಿರಲ್ ವಾಟೡ

ಪಾನ್ ಮಸಾಲಾ, ಬೀಡಿ-ಸಿಗರೇಟು, ಬ್ರಾಂಡೆಡ್ ಆಭರಣ

ಬ್ರಾಂಡೆಡ್​ ಬಟ್ಟೆ, ಕೇಬಲ್ ಟಿವಿ, ಕೋರಿಯರ್ ಸರ್ವಿಸ್

ಎಲ್​ಪಿಜಿ, ಮೊಬೈಲ್​ ಕರೆ, ವಿಮಾನಯಾನ, ರೈಲ್ವೇ ಪ್ರಯಾಣ

ವಸತಿ ಕಟ್ಟಡಗಳ ಬಾಡಿಗೆಯಿಂದ ಬರುವ ಆದಾಯದ ಮೇಲೆ ತೆರಿಗೆ

ಯಾವುದು ಅಗ್ಗ?

-ಕಾರು, ಬೈಕ್​ಗಳ ಬೆಲೆಯಲ್ಲಿ ಇಳಿಕೆ

-ಸಿಮೆಂಟ್​, ಪೇಂಟ್​, ಆಟಿಕೆಗಳು

-ಸಿನಿಮಾ ಟಿಕೆಟ್ಸ್

-ಫ್ಯಾನ್ ಮತ್ತು ಏರ್ ಕೂಲರ್

-ವಾಟರ್ ಹೀಟರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು

ಪ್ರಧಾನಿ ಮೋದಿಯವರಂತೂ ಹೊಸ ವರ್ಷ, ಹೊಸ ಕಾನೂನು, ಹೊಸ ಭಾರತ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಹು ನೀರಿಕ್ಷಿತ ಜಿಎಸ್​ಟಿ ಬಿಲ್ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಜುಲೈನಲ್ಲಿ ಜಾರಿಯಾಗುವ ಸಾಧ್ಯತೆಯಿದೆ.