ಕೇರಳದ ನಿವಾಸಿ ಸಲೀಂ (45) ಬಂಧಿತ ಆರೋಪಿ. ಈತನನ್ನು ಕೇರಳದ ಕಣ್ಣನೂರಿನಲ್ಲಿ ಬಂಧಿಸಲಾಗಿದೆ. 2008ರ ಜುಲೈ 25ರಂದು ಬೆಂಗಳೂರಿನ ಮಡಿವಾಳ, ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಸಾಕಷ್ಟು ಕಡೆ ಬಾಂಬ್‌ ಇಡಲಾಗಿತ್ತು. ಮಡಿವಾಳದಲ್ಲಿ ಬಾಂಬ್‌ ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟಿದ್ದರು. ಬಳಿಕ ಬಾಂಬ್‌ ಸ್ಫೋಟದ ರೂವಾರಿ ಮದನಿಯನ್ನು ಸೆರೆ ಹಿಡಿಯಲಾಗಿತ್ತು.

ಬೆಂಗಳೂರು[ಅ.11]: 10 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟದ ಆರೋಪಿಯೊಬ್ಬನನ್ನು ಸಿಟಿ ಕ್ರೈಂ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

ಕೇರಳದ ನಿವಾಸಿ ಸಲೀಂ (45) ಬಂಧಿತ ಆರೋಪಿ. ಈತನನ್ನು ಕೇರಳದ ಕಣ್ಣನೂರಿನಲ್ಲಿ ಬಂಧಿಸಲಾಗಿದೆ. 2008ರ ಜುಲೈ 25ರಂದು ಬೆಂಗಳೂರಿನ ಮಡಿವಾಳ, ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಸಾಕಷ್ಟು ಕಡೆ ಬಾಂಬ್‌ ಇಡಲಾಗಿತ್ತು. ಮಡಿವಾಳದಲ್ಲಿ ಬಾಂಬ್‌ ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟಿದ್ದರು. ಬಳಿಕ ಬಾಂಬ್‌ ಸ್ಫೋಟದ ರೂವಾರಿ ಮದನಿಯನ್ನು ಸೆರೆ ಹಿಡಿಯಲಾಗಿತ್ತು. 

2008ರಿಂದ ತಲೆ ಮರೆಸಿಕೊಂಡು ಸಲೀಂ ಎಸ್ಕೇಪ್‌ ಆಗಿದ್ದ. ಕೇರಳದ ಕಣ್ಣನೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಬೆಂಗಳೂರಿನ ಮಡಿವಾಳದಲ್ಲಿ ಬಾಂಬ್‌ ಇಟ್ಟಿದ್ದು ಈತನೇ ಎಂದು ಮೂಲಗಳು ತಿಳಿಸಿವೆ. ಸಿಸಿಬಿ ವಿಶೇಷ ವಿಚಾರಣಾ ತಂಡ ಎಸಿಪಿ ಸುಬ್ರಹ್ಮಣ್ಯ ಮತ್ತು ಪಿಎಸ್‌ಐ ಪ್ರವೀಣ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.