ಕಾನೂನು ಬಾಹಿರವಾಗಿ ಆರ್ಡರ್ಲಿಗಳನ್ನು ನೇಮಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ಸಲ್ಲಿಕೆಯಾಗಿದೆ. ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ವಕೀಲರಾದ ಸುಧಾ ಕಟವಾ, ವಕೀಲ ಉಮಾಪತಿ ಕಂಪ್ಲೇಂಟ್​ ನೀಡಿದ್ದಾರೆ.

ಬೆಂಗಳೂರು (ಜೂ.27): ಕಾನೂನು ಬಾಹಿರವಾಗಿ ಆರ್ಡರ್ಲಿಗಳನ್ನು ನೇಮಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ಸಲ್ಲಿಕೆಯಾಗಿದೆ. ರಾಜ್ಯ ಪೊಲೀಸ್ ಪ್ರಾಧಿಕಾರಕ್ಕೆ ವಕೀಲರಾದ ಸುಧಾ ಕಟವಾ, ವಕೀಲ ಉಮಾಪತಿ ಕಂಪ್ಲೇಂಟ್​ ನೀಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಪೇದೆಗಳನ್ನು ಜೀತದಾಳುಗಳ ರೀತಿ ಮನೆಕೆಲಸಗಳಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸುವರ್ಣನ್ಯೂಸ್​ ವರದಿ ಮಾಡಿತ್ತು. ಆರ್ಡರ್ಲಿ ಪದ್ದತಿಯನ್ನು ರದ್ದುಗೊಳಿಸಿದ್ದರೂ ನಿಯಮ ಉಲ್ಲಂಘಿಸಿರುವ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡಿತ್ತು. ಇದೇ ಆಧಾರದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಎಡಿಜಿಪಿ, ಐಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. 51 ಐಪಿಎಸ್ ಅಧಿಕಾರಿಗಳು ಸೇರಿ 81 ಅಧಿಕಾರಿಗಳು ಆರ್ಡರ್ಲಿಗಳ ನೇಮಕ ಮಾಡಿಕೊಂಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಕಿಸಲಾಗಿದೆ.