ಕೇರಳದ ಪಾದ್ರಿ ಡೇವಿಸ್ ಖಿರಮೆಲ್ ಎಂಬುವರು 5 ವರ್ಷದ ಹಿಂದೆ ಅಪರಿಚಿತರೊಬ್ಬರಿಗೆ ಕಿಡ್ನಿ ದಾನ ಮಾಡಿದ್ದರು.
ತಿರುವನಂತಪುರಂ(ಡಿ.22): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 29 ವರ್ಷದ ಮುಸ್ಲಿಂ ಮಹಿಳೆಗೆ ಕೇರಳದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ತಮ್ಮ ಕಿಡ್ನಿಯನ್ನು ದಾನ ಮಾಡಿದ ಅಪರೂಪದ ಘಟನೆ ನಡೆದಿದೆ.
ವೈನಾಡ್'ನಲ್ಲಿರುವ ಜಾಕೊಬಿಟ್ ಚರ್ಚ್‌ನ ಪಾದ್ರಿ 30 ವರ್ಷದ ಶಿಭು ಯೊಹನ್ನಾನ್ ಅವರು ಕ್ರಿಸ್‌ಮಸ್ ಮಾಸದಲ್ಲಿ ಅನನ್ಯ ಸೇವೆಗೈದ ಮಾದರಿ ವ್ಯಕ್ತಿಯಾಗಿದ್ದಾರೆ.
ಕೇರಳದ ಪಾದ್ರಿ ಡೇವಿಸ್ ಖಿರಮೆಲ್ ಎಂಬುವರು 5 ವರ್ಷದ ಹಿಂದೆ ಅಪರಿಚಿತರೊಬ್ಬರಿಗೆ ಕಿಡ್ನಿ ದಾನ ಮಾಡಿದ್ದರು, ಇದರಿಂದ ಪ್ರೇರೇಪಿತಗೊಂಡ ಶಿಭು ಬುಧವಾರ ತ್ರಿಶೂರ್‌ನ ಚವಕ್ಕಾಡ್ ಮೂಲದ ಖೈರುನ್ನೀಸಾ ಎಂಬ ಮಹಿಳೆಗೆ ಕಿಡ್ನಿ ನೀಡಿದ್ದಾರೆ.
3 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖೈರುನ್ನೀಸಾ, ಒಂದೂವರೆ ವರ್ಷದಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು.
