ಇಷ್ಟುದಿನ ಬಹಳ ಉತ್ಸಾಹದಿಂದ ಮನೆಯ ಯಜಮಾನನಂತೆ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸುವುದು, ಅವುಗಳನ್ನು ನಿಯಂತ್ರಿಸುವುದು ಮಾಡುತ್ತಿದ್ದ ಅಡ್ಮಿನ್‌ಗಳು ಈಗ ಮೆತ್ತಗೆ ತಮ್ಮ ಗ್ರೂಪ್‌ಗೆ ಬೇರೆಯವರನ್ನು ಅಡ್ಮಿನ್‌ ಮಾಡಿ ತಾವು ಎಕ್ಸಿಟ್‌ ಆಗುತ್ತಿದ್ದಾರೆ.

ವಾಟ್ಸಪ್‌ ಗ್ರೂಪ್‌ನಲ್ಲಿ ಯಾರಾದರೂ ಆಕ್ಷೇಪಾರ್ಹ ಬರಹ ಬರೆದು, ಫೋಟೋ ಪ್ರಕಟಿಸಿದರೆ ಗ್ರೂಪ್‌ನ ಅಡ್ಮಿನ್‌ಗಳನ್ನು ಅರೆಸ್ಟ್‌ ಮಾಡುವ ಹೊಸ ನಿಯಮ ದಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಮುರ್ಡೇಶ್ವರದ ವಾಟ್ಸಾಪ್‌ ಗ್ರೂಪ್‌ನ ಅಡ್ಮಿನ್ನನ್ನು ಬಂಧಿಸಿದ ನಂತರವಂತೂ ದೇಶಾದ್ಯಂತ ವಾಟ್ಸಾಪ್‌ ಗ್ರೂಪ್‌ಗಳ ಅಡ್ಮಿನ್‌ಗಳು ಕಂಗಾಲಾಗಿದ್ದಾರೆ. ಇಷ್ಟುದಿನ ಬಹಳ ಉತ್ಸಾಹದಿಂದ ಮನೆಯ ಯಜಮಾನನಂತೆ ವಾಟ್ಸಾಪ್‌ ಗ್ರೂಪ್‌ಗಳನ್ನು ರಚಿಸುವುದು, ಅವುಗಳನ್ನು ನಿಯಂತ್ರಿಸುವುದು ಮಾಡುತ್ತಿದ್ದ ಅಡ್ಮಿನ್‌ಗಳು ಈಗ ಮೆತ್ತಗೆ ತಮ್ಮ ಗ್ರೂಪ್‌ಗೆ ಬೇರೆಯವರನ್ನು ಅಡ್ಮಿನ್‌ ಮಾಡಿ ತಾವು ಎಕ್ಸಿಟ್‌ ಆಗುತ್ತಿದ್ದಾರೆ. ಇನ್ನು, ಹೀಗೆ ಹೊಸತಾಗಿ ಅಡ್ಮಿನ್‌ ಆದವರು ಏಕಾಏಕಿ ತಾವು ಈ ಗ್ರೂಪ್‌ಗೆ ಅಡ್ಮಿನ್‌ ಆಗಿದ್ದು ಹೇಗೆ ಎಂಬುದು ತಿಳಿಯದೆ ಕಂಗಾಲಾಗಿರುವುದು ಕೂಡ ವರದಿಯಾಗಿದೆ.