ಘಾಜಿಯಾಬಾದ್‌[ಮೇ.29]: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಪುತ್ರ ಬುಕುಲ್‌ನಾಥ್‌ ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ನೀಡಿದ್ದ ಕೋಟ್ಯಂತರ ರು.ಮೌಲ್ಯದ ಭೂಮಿಯನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಕೈಗೊಂಡಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಜಿ(ಐಎಂಟಿ) ಶಿಕ್ಷಣ ಸಂಸ್ಥೆಗೆ ನಗರ ವ್ಯಾಪ್ತಿಯಲ್ಲೇ ಇದ್ದ ನೂರಾರು ಕೋಟಿ ರು. ಬೆಲೆಬಾಳುವ 10,841 ಸ್ಕ್ವೇರ್‌ ಮೀಟರ್‌ ಭೂಮಿ ಮಂಜೂರು ಮಾಡಲಾಗಿತ್ತು. ಈ ಸಂಬಂಧ ಬಿಜೆಪಿ ಕಾರ್ಪೊರೇಟರ್‌ ರಾಜೇಂದ್ರ ತ್ಯಾಗಿ ಎಂಬವರು ದೂರು ನೀಡಿದ್ದರು.

ಇದನ್ನು ಪರಿಶೀಲಿಸಿದ ಉತ್ತರಪ್ರದೇಶ ಸರ್ಕಾರ ಮಂಜೂರು ಆದೇಶವನ್ನು ರದ್ದುಗೊಳಿಸಿಸುವಂತೆ ಘಾಜಿಯಾಬಾದ್‌ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಈಗಾಗಲೇ ಈ ಸ್ಥಳದಲ್ಲಿ ನಿರ್ಮಿಸಲಾದ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶದಲ್ಲಿ ಹೇಳಲಾಗಿದೆ.