ಶ್ರೀಗಳ ವಕಾಲತ್ತು; ಡಿಕೆಶಿಗೆ ಇಂಧನ ಖಾತೆ ಸಿಗುತ್ತಾ?

Adichunchanagiri Nirmalananda Seer bats for D K Shivkumar
Highlights

ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಸಮುದಾಯದಲ್ಲಿ ತಪ್ಪು ಮಾಹಿತಿ ರವಾನೆಯಾಗಬಾರದು. ಜೆಡಿಎಸ್ ಇಂಧನ ಖಾತೆ ಉಳಿಸಿಕೊಂಡಿದೆ. ಡಿಕೆಶಿಗೆ ನಿರಾಸೆ ಎಂಬ ಸಂದೇಶ ಹೋಗಬಾರದು ಎಂಬ ಸಂದೇಶವನ್ನು  ಶ್ರೀಗಳು ನೀಡಿದ್ದಾರೆ.  ಹಾಗಾಗಿ ಕಾಂಗ್ರೆಸ್ ಗೆ ಮತ್ತೆ ಇಂಧನ ಖಾತೆ ಲಭ್ಯವಾಗುವ ಸಾಧ್ಯತೆ ಇದೆ.  

ಬೆಂಗಳೂರು (ಜೂ. 06): ಇಂಧನ ಖಾತೆ ಜೆಡಿಎಸ್ ಪಾಲಾದರೂ ಡಿ.ಕೆ ಶಿವಕುಮಾರ್ ಸುಮ್ಮನಾಗಿಲ್ಲ. ನಾನು ಏಕಾಂಗಿಯಲ್ಲ ಎನ್ನುವ ಮೂಲಕ ಎಚ್.ಡಿ ರೇವಣ್ಣಗೆ ನಾನು ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಡಿಕೆಶಿ. 

ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳ ಬಳಿ ಇಂಧನ ಖಾತೆ ವಿಚಾರವನ್ನು ಮುಂದಿಟ್ಟಿದ್ದಾರೆ.  ಡಿ.ಕೆ ಶಿವಕುಮಾರ್ ಪರ ಶ್ರೀಗಳು ಜೆಡಿಎಸ್’ಗೆ ಸಂದೇಶ ರವಾನಿಸಿದ್ದಾರೆ. 

ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ. ಸಮುದಾಯದಲ್ಲಿ ತಪ್ಪು ಮಾಹಿತಿ ರವಾನೆಯಾಗಬಾರದು. ಜೆಡಿಎಸ್ ಇಂಧನ ಖಾತೆ ಉಳಿಸಿಕೊಂಡಿದೆ. ಡಿಕೆಶಿಗೆ ನಿರಾಸೆ ಎಂಬ ಸಂದೇಶ ಹೋಗಬಾರದು ಎಂಬ ಸಂದೇಶವನ್ನು  ಶ್ರೀಗಳು ನೀಡಿದ್ದಾರೆ.  ಹಾಗಾಗಿ ಕಾಂಗ್ರೆಸ್ ಗೆ ಮತ್ತೆ ಇಂಧನ ಖಾತೆ ಲಭ್ಯವಾಗುವ ಸಾಧ್ಯತೆ ಇದೆ. 

ಶ್ರೀಗಳ ಕಿವಿಮಾತನ್ನ ಕುಮಾರಸ್ವಾಮಿ ದೇವೇಗೌಡರಿಗೆ ತಲುಪಿಸಿದ್ದಾರೆ.  ಎಚ್.ಡಿ. ರೇವಣ್ಣ ಗೆ ತಿಳಿಹೇಳಿ ಎಂದು ಗೌಡರಿಗೆ ಎಚ್.ಡಿ.ಕೆ ಮನವಿ ಮಾಡಿದ್ದಾರೆ.  ಇದೀಗ ಇಂಧನ ಖಾತೆ ಕಾಂಗ್ರೆಸ್ ಗೆ ನೀಡುವ ಬಗ್ಗೆ ಜೆಡಿಎಸ್ ಒಳಗೆ ಬಿರುಸಿನ ಚರ್ಚೆ ಶುರುವಾಗಿದೆ. 
 
loader