ನಿರ್ಮಲಾನಂದ ನಾಥ ಸ್ವಾಮೀಜಿಗೂ ತಟ್ಟಿದ ಕಿಮ್ಸ್ ಪ್ರತಿಭಟನೆ ಬಿಸಿ

Adichunchanagiri Mutt Seer Sri Nirmalanandanatha Swamiji absence to KIMS Meet
Highlights

ಒಕ್ಕಲಿಗರ ಸಂಘದ ನೌಕಕರ ಪ್ರತಿಭಟನೆ ಬಿಸಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೂ ತಟ್ಟಿದೆ. ಒಕ್ಕಲಿಗ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಭೆಗೆ ಸ್ವಾಮೀಜಿ ಆಗಮಿಸಿಲ್ಲ. ಕಾರಣ ಏನು? ಇಲ್ಲಿದೆ ಉತ್ತರ..

Adichunchanagiri Mutt Seer Sri Nirmalanandanatha Swamiji absence to KIMS Meet

ಬೆಂಗಳೂರು(ಜೂನ್ 18) ಒಕ್ಕಲಿಗರ ಸಂಘದ ನೌಕಕರ ಪ್ರತಿಭಟನೆ ಬಿಸಿ ನಿರ್ಮಲಾನಂದ ನಾಥ ಸ್ವಾಮೀಜಿ ಅವರಿಗೂ ತಟ್ಟಿದೆ. ಒಕ್ಕಲಿಗ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಭೆಗೆ ಸ್ವಾಮೀಜಿ ಆಗಮಿಸಿಲ್ಲ. 

ವಿವರಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಿಮ್ಸ್ ನೌಕರರು ಒಕ್ಕಲಿಗರ ಸಂಘದ ಎದುರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಒ್ರತಿಭಟನೆ ಸ್ಥಗಿತ ಮಾಡಿದರೆ ಮಾತ್ರ ಸಭೆಗೆ ಆಗಮಿಸುತ್ತೇನೆ ಎಂದು ಸ್ವಾಮೀಜಿ ಈ ಹಿಂದೆಯೇ ಹೇಳಿದ್ದರು. ಆದರೆ ಇಂದೂ ಸಹ ಪ್ರತಿಭಟನೆ ಮುಂದುವರಿದ ಕಾರಣ ಮುತ್ತಿಗೆ ಹಾಕಬಹುದು ಎಂಬ ಕಾರಣಕ್ಕೆ ಸ್ವಾಮೀಜಿ ಆಗಮಿಸಿಲ್ಲ. 

ಸಭೆ ಕರೆದ ಬೆಟ್ಟೆಗೌಡ: ಸ್ವಾಮೀಜಿ ಸಭೆಗೆ ಆಗಮಿಸದ ಹಿನ್ನೆಲೆಯಲ್ಲಿ ಕೂಡಲೇ ಸಭೆ ಕರೆದಿರುವ ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟಗೌಡ ಒಕ್ಕಲಿಗ ಪ್ರತಿಭಟನಾನಿರತರು ಮತ್ತು  ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಅಧ್ಯಕ್ಷರ ಮನವಿಗೆ ಬಗ್ಗದ ಒಕ್ಕಲಿಗ ಸಂಘ ನೌಕರರ ಸಂಘ, ಹೆಚ್ಚುವರಿ ನೇಮಕ ಮಾಡಿಕೊಂಡಿರುವ ಸಿಬ್ಬಂದಿ ಕೂಡಲೇ ಅಮಾನತು  ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.  ಜೂನ್ 21 ರಂದು ಕಾರ್ಯಕಾರಣಿ  ಸಭೆ ಇದ್ದು ಅಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದರೂ ಪ್ರತಿಭಟನಾಕಾರರು ಬೆಲೆ ಕೊಟ್ಟಿಲ್ಲ. 

loader