Asianet Suvarna News Asianet Suvarna News

ದಿಲೀಪ್ ಬಂಧನದ ಬಗ್ಗೆ ಸಂತ್ರಸ್ತ ನಟಿ ಏನೆಂದರು ಗೊತ್ತೆ

 ಪ್ರಕರಣ ಸಂಬಂಧ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರುನೀಡಿರಲಿಲ್ಲಆದರೆನಟ ದಿಲೀಪ್ ಕುಮಾರ್ ಅವರ ಬಂಧನ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ,’ ಎಂದು ಹೇಳಿದ್ದಾರೆ.

Actress speak about Dileep
  • Facebook
  • Twitter
  • Whatsapp

ತಿರುವನಂತಪುರ(ಜು.14): ಕೇರಳ ಮೂಲದ ಬಹುಭಾಷಾ ನಟಿ ಅವರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸೂಪರ್‌ ಸ್ಟಾರ್ ದಿಲೀಪ್ ಕುಮಾರ್ ಬಂಧನ ವಿಚಾರವಾಗಿಇದೇ ಮೊದಲ ಬಾರಿಗೆ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿದ ಸಂತ್ರಸ್ತ ನಟಿ, ‘ಈ ಪ್ರಕರಣ ಸಂಬಂಧ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರುನೀಡಿರಲಿಲ್ಲ. ಆದರೆ, ನಟ ದಿಲೀಪ್ ಕುಮಾರ್ ಅವರ ಬಂಧನ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ,’ ಎಂದು ಹೇಳಿದ್ದಾರೆ.

‘ನಾನು ಮತ್ತು ದಿಲೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದೆವು. ಕೆಲವು ವೈಯಕ್ತಿಕ ವೈಮನಸ್ಯಗಳಿಂದ ನಾವಿಬ್ಬರೂ ದೂರವಾಗಿದ್ದೇವೆ. ಆದರೆ, ಈ ಪ್ರಕರಣದಲ್ಲಿ ನಾನು ಹೆಸರನ್ನೂ ಸಹ ಉಲ್ಲೇಖಿಸಿದೂರು ದಾಖಲಿಸಿರಲಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದಿಲೀಪ್ ಕುಮಾರ್ ಹೇಳಿದ್ದಾರೆ. ಸತ್ಯ ಹೊರ ಬರಲೇಬೇಕಿದ್ದು, ದಿಲೀಪ್ ಕುಮಾರ್ ನಿರಪರಾಧಿಯಾಗಿದ್ದರೂ, ಸತ್ಯಶೀಘ್ರವೇ ಹೊರಬರಬೇಕು. ಶೀಘ್ರದಲ್ಲೇ ಸತ್ಯ ಹೊರಬೀಳಲಿದೆ,’ ಎಂದಿದ್ದಾರೆ.

 

Follow Us:
Download App:
  • android
  • ios