ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾ ಗಾಂಧಿ   ರಾಯಚೂರು 2ನೇ ಅಪರ ಜೆಎಂಎಫ್ ಸಿ ನ್ಯಾಯಲಯದಲ್ಲಿ ಇಂದು ವಿಚಾರಣೆಗೆ ಹಾಜರಾದರು.

ರಾಯಚೂರು (ಡಿ.04): ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾ ಗಾಂಧಿ ರಾಯಚೂರು 2ನೇ ಅಪರ ಜೆಎಂಎಫ್ ಸಿ ನ್ಯಾಯಲಯದಲ್ಲಿ ಇಂದು ವಿಚಾರಣೆಗೆ ಹಾಜರಾದರು.

2013 ರಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಬಿಎಸ್ಅರ್ ಕಾಂಗ್ರೆಸ್ ಪಕ್ಷದಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಈ ವೇಳೆ ಪರವಾನಿಗೆ ಇಲ್ಲದೆ ವಾಹನವನ್ನು‌ ಪ್ರಚಾರಕ್ಕೆ ಬಳಸಿದ್ದರು. ಈ ಕುರಿತು ಸದರ ಬಜಾರ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆದ ವಿಚಾರಣೆಯಲ್ಲಿ ಪೂಜಾಗಾಂಧಿ ಜೆಎಂಎಫ್'ಸಿ ಕೋರ್ಟ್​ಗೆ ಹಾಜರಾದರು.

ಜೆಎಂಎಫ್ ಸಿ ಕೋರ್ಟ್​ ಮುಂದಿನ ವಿಚಾರಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಿದೆ.

ವಿಚಾರಣೆ ಮುಗಿಸಿ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದಂಡುಪಾಳ್ಯೆ-3 ಚಲನಚಿತ್ರ ಬಿಡುಗಡೆಗೆ ಸಿದ್ದತೆ ನಡೆಯುತ್ತಿದೆ. ಜನವರಿ ತಿಂಗಳಲ್ಲಿ ಟೆಲಿಫಿಲ್ಮ್ ಪ್ರೊಡಕ್ಷನ್ ಮಾಡುತ್ತೇನೆ. ಈಗ ನಾನು ಸಂತೋಷವಾಗಿದ್ದೇನೆ. ಹುಡುಗಿಯಾಗಿ ಬೇಗ ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ಸಂದರ್ಭದಲ್ಲಿ ಎಲ್ಲರಿಗೂ ಹೇಳುತ್ತೇನೆ. ಬೇಗನೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.

ರಾಜಕಾರಣ ಸೇರುವ ಯೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ. ಉಪೇಂದ್ರರ ರಾಜಕೀಯ ಪಕ್ಷಕ್ಕೆ ಬೆಸ್ಟ ಆಫ್ ಲಕ್ ಎಂದಿದ್ದಾರೆ.