ಸ್ಯಾಂಡಲ್'ವುಡ್ ದಗ್ಗಜರೊಡನೆ ನಟಿಸಿ ಬಿಗ್ ಬಾಸ್ ಮನೆಗೆ ಹೊಗುವ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಬಹುಭಾಷಾ ನಟಿ ನಿಖಿತಾ ತುಕ್ರಾಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ.

ಮುಂಬೈ ಮೂಲದ ಗಗನ್ ದೀಪ್ ಮನೆಗೆ ಗೃಹಪ್ರವೇಶ ಮಾಡಲು ತಯಾರಾಗಿರುವ ನಿಖಿತ ಸದ್ದಿಲ್ಲದೆ ಮದುವೆ ತಯಾರಿ ಮುಗಿಸಿದ್ದಾರೆ. ಇದೇ ಗುರುವಾರ ಮುಂಬೈನ ಪಂಚತಾರ ಹೋಟೆಲ್'ನಲ್ಲಿ ದಾಂಪತ್ಯಕ್ಕೆ ಕಾಲಿಡಲಿರುವ ನಿಖಿತ ಮಹರಾಜ ಸಿನಿಮಾ ಮೂಲಕ ಸ್ಯಾಂಡಲ್'ವುಡ್ ಏಂಟ್ರೀ ಕೊಟ್ಟು ಬಳಿಕ ವಂಶಿ, ಯೋಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ದುಬೈ ಬಾಬು, ನೀ ಟಾಟ ನಾ ಬಿರ್ಲಾ ಸೇರಿದಂತೆ 40ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಸದ್ಯ ಮುಕುಂದ ಮುರಾರಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ನಿಕಿತಾ ಮದುವೆಯಾಗಲಿರುವ ಗಗನ್ ದೀಪ್ ಆಕೆಯ ಸೋದರಿಯ ಸ್ನೇಹಿತ ಎಂಬ ವಿಚಾರವೂ ತಿಳಿದು ಬಂ