ಫ್ರಾನ್ಸ್ ರಾಜಧಾನಿಯ ಅಪಾರ್ಟ್'ಮೆಂಟ್ ಲಾಬಿಯಲ್ಲಿ ಕುಳಿತಿದ್ದ ಈ ಇಬ್ಬರ ಬಳಿ ಬಂದ ಆಗುಂತಕರು, ನಟಿಯ ಮುಖಕ್ಕೆ ಗುದ್ದುತ್ತಾರೆ.

ಪ್ಯಾರಿಸ್(ನ. 18): ಬಾಲಿವುಡ್ ಗ್ಲಾಮರ್ ಬೆಡಗಿ ಮಲ್ಲಿಕಾ ಶೆರಾವತ್ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಮಲ್ಲಿಕಾ ಶೆರಾವತ್ ಹಾಗೂ ಅವರ ಸ್ನೇಹಿತನ ಮೇಲೆ ಮೂವರು ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ದಾಳಿ ನಡೆಸಿದ್ದರೆಂದು ಫ್ರಾನ್ಸ್ ದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ ಇದು ಕಳ್ಳತನ ಪ್ರಯತ್ನದ ಪ್ರಕರಣವಿರಬಹುದೆನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫ್ರಾನ್ಸ್ ರಾಜಧಾನಿಯ ಅಪಾರ್ಟ್'ಮೆಂಟ್ ಲಾಬಿಯಲ್ಲಿ ಕುಳಿತಿದ್ದ ಈ ಇಬ್ಬರ ಬಳಿ ಬಂದ ಆಗುಂತಕರು, ನಟಿಯ ಮುಖಕ್ಕೆ ಗುದ್ದುತ್ತಾರೆ. ಇಬ್ಬರ ಮೇಲೆ ಟಿಯರ್'ಗ್ಯಾಸ್ ಎರಚುತ್ತಾರೆ. ಬಳಿಕ ಮಲ್ಲಿಕಾಳ ಕೈಲಿದ್ದ ಹ್ಯಾಂಡ್'ಬ್ಯಾಂಗನ್ನು ಕಿತ್ತುಕೊಂಡು ಹೋಗಲು ಯತ್ನಿಸುತ್ತಾರೆ. ಅದರೆ, ನಟಿ ಜೋರಾಗಿ ಕಿರುಚುತ್ತಿದ್ದಂತೆಯೇ ಆ ಹಲ್ಲೆಕೋರರು ಹ್ಯಾಂಡ್'ಬ್ಯಾಗನ್ನು ಕಿತ್ತುಕೊಳ್ಳದೇ ಅಲ್ಲಿಂದ ಪರಾರಿಯಾಗುತ್ತಾರೆ. ನವೆಂಬರ್ 11ರಂದು ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಟಿ ಕಿಮ್ ಮೇಲೆ ಹೀಗೇ ಆಗಿತ್ತು:
ಪ್ಯಾರಿಸ್'ನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆಯೇ ಎಂಬ ಅನುಮಾನಕ್ಕೆ ಮೇಲಿನ ಮಲ್ಲಿಕಾ ಶೆರಾವತ್ ಪ್ರಕರಣ ಪುಷ್ಟಿ ನೀಡಿದೆ. ಕೆಲ ವಾರಗಳ ಹಿಂದೆ ಅಮೆರಿಕದ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ 10 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನು ಲಪಟಾಯಿಸಿದ್ದರು.