'ಬಾಬಿ ಜಿ ಘರ್ ಪರ್ ಹೇ' ಧಾರಾವಾಹಿಯ ನಟಿಯೊಬ್ಬರು ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಎಫ್ ಐಆರ್ ದಾಖಲಿಸಿದ್ದಾರೆ.
ಮುಂಬೈ (ಮಾ.24): 'ಬಾಬಿ ಜಿ ಘರ್ ಪರ್ ಹೇ' ಧಾರಾವಾಹಿಯ ನಟಿಯೊಬ್ಬರು ನಿರ್ಮಾಪಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಎಫ್ ಐಆರ್ ದಾಖಲಿಸಿದ್ದಾರೆ.
ಈ ನಿರ್ಮಾಪಕ ಕೆಲ ಸಮಯದ ಹಿಂದೆ ಟಿವಿ ಶೋವೊಂದನ್ನು ನಡೆಸುತ್ತಿದ್ದರು. ಹಳ ಹಿಂದೆಯೇ ಈ ನಟಿ ಶೋ ಇಂದ ಹೊರ ಬಂದಿದ್ದರು. ಆದರೂ ಆಕೆಗೆ ನಿರ್ಮಾಪಕ ಮಾನಸಿಕ ಹಿಂಸೆ ನೀಡುತ್ತಿದ್ದ. ಬಾಬಿ ಜಿ ಘರ್ ಪರ್ ಹೇ ಧಾರಾವಾಹಿಯಲ್ಲಿ ಆಕೆ ನಟನೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಅದರಿಂದ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಎಂದು ನಟಿಯೊಬ್ಬರು ದೂರು ನೀಡಿದ್ದಾರೆ.
