ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಸ್ಪಂದನ ವಿಜಯರಾಘವೇಂದ್ರ, ಮಾಳವಿಕ ಅವಿನಾಶ್ ಹಾಗೂ ಅಮೂಲ್ಯ ಸ್ನೇಹಿತರಾದ ವೈಷ್ಣವಿ ಸೇರಿದಂತೆ ಸಾಕಷ್ಟು ಸ್ನೇಹಿತರು,ಬಂಧುಬಳಗದವರು ಗಣೇಶ್ ಮನೆಗೆ ಆಗಮಿಸಿದ್ದರು.

ಅಮೂಲ್ಯ ಜಗದೀಶ್ ಕಲಾಣ್ಯೋತ್ಸವಕ್ಕೆ ಎರಡು ದಿನ ಬಾಕಿ ಇರುವಾಗ್ಲೇ, ಜಗದೀಶ್ ಆರ್ ಆರ್ ನಗರದಲ್ಲಿರೋ ನಿವಾಸದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಕ್ಕಲಿಗರ ಸಾಂಪ್ರದಾಯದಂತೆ ವರ ಜಗದೀಶ್'ಗೆ ಸಂಬಂಧಿಕರು ಹಾಗು ಸ್ನೇಹಿತರು ಅರಿಶಿನ ಶಾಸ್ತ್ರ ಮಾಡಲಾಯಿತು. ಈ ಶಾಸ್ತ್ರ'ದ ಕೊನೆಯಲ್ಲಿ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಜಗದೀಶ್ ಗೆ ಅರಿಶಿನ ಹಚ್ವಿದರು.

ಅರಿಶಿನ ಶಾಸ್ತ್ರಕ್ಕೆ ಮತ್ತಷ್ಟು ಕಳೆ ತಂದಿದ್ದು ಪಂಜಾಬಿ ಡೋಲು ಕುಣಿತ. ಜಗದೀಶ್ ತಂದೆ ರಾಮಚಂದ್ರ ಹಾಗು ಬಂಧು ಮಿತ್ರರು ಡ್ಯಾನ್ಸ್ ಮಾಡುವ ಮೂಲಕ ಅರಿಶಿನ ಶಾಸ್ತ್ರದ ಸಂಭ್ರಮವನ್ನು ಎಂಜಾಯ್ ಮಾಡಿದರು. ಮಧು ಮಗನಿಗೆ ಅರಿಶಿನ ಶಾಸ್ತ್ರ ಮುಗಿದ ನಂತರ ಜಗದೀಶ್'ಗೆ ತೂಗು ಉಯ್ಯಾಲೆ ಮೇಲೆ ಕುರಿಸಿ ಜಗದೀಶ್ ಸಂಬಂಧಿಕರು ಅರಿಶಿನ ನೀರನ್ನ ಮೈ ಮೇಲೆ ಹಾಕಲಾಯಿತು.ಇನ್ನು ಅಮೂಲ್ಯ ಮೆಹಂದಿ ಕಾರ್ಯಕ್ರಮ ಗಣೇಶ್ ಮನೆಯಲ್ಲಿ ಅದ್ದೂರಿಯಾಗಿ ಮಾಡಲು ಸಕಲ ಸಿದ್ಧತೆಗಳು ನಡೆದಿದ್ದು. ರೆಡ್ ಕಲರ್ ಲೆಹೆಂಗಾದಲ್ಲಿ ಐಶೂ ಕಂಗೊಳಿಸುತ್ತಿದ್ದರು.

ಮೆಹಂದಿ ಕಾರ್ಯಕ್ರಮದಲ್ಲಿ ನಟನಟಿಯರು ಭಾಗಿ

ಅಮೂಲ್ಯ ಮೆಹಂದಿ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್, ಸ್ಪಂದನ ವಿಜಯರಾಘವೇಂದ್ರ, ಮಾಳವಿಕ ಅವಿನಾಶ್ ಹಾಗೂ ಅಮೂಲ್ಯ ಸ್ನೇಹಿತರಾದ ವೈಷ್ಣವಿ ಸೇರಿದಂತೆ ಸಾಕಷ್ಟು ಸ್ನೇಹಿತರು,ಬಂಧುಬಳಗದವರು ಗಣೇಶ್ ಮನೆಗೆ ಆಗಮಿಸಿದ್ದರು. ಮೆಹಂದಿ ಕಾರ್ಯಕ್ರಮದ ನಂತರ ನಟ ಗಣೇಶ್ ಮನೆಯಲ್ಲಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಈ ಸಂಭ್ರಮದಲ್ಲಿ ನವ ದಂಪತಿಗಳ ಜೊತೆ ಗಣೇಶ್, ನೆನಪಿರಲಿ ಪ್ರೇಮ್,ಸುಧಾರಾಣಿ ಸೇರಿದಂತೆ ಹಲವರು ಡ್ಯಾನ್ಸ್ ಮಾಡಿದರು. ಒಟ್ಟಿನಲ್ಲಿ ಅಮೂಲ್ಯ ಮತ್ತು ಜಗದೀಶ್ ಕಲಾಣ್ಯೋತ್ಸವಕ್ಕೆ ಅದ್ದೂರಿ ಕಾರ್ಯಕ್ರಮಗಳು ನಡೆದಿದ್ದು. 12ರಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ 12 ಗಂಟೆ ಶುಭ ಲಗ್ನದಲ್ಲಿ ಹಸೆಮಣೆ ಏರಲಿದ್ದಾರೆ.