ಯಶ್ ಅಭಿಮಾನಿಗಳ ವರ್ತನೆ ಎಲ್ಲೇ ಮೀರಿತು, ಶಾಸಕ ಮಾನಪ್ಪ ವಜ್ಜಲ್ ಹಾಗೂ ಸಂಘಟಕರು ಪದೇ ಪದೆ ಮನವಿ ಮಾಡಿದರು ಅಭಿಮಾನಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಇದರ ಮಧ್ಯೆ ಪ್ರೇಕ್ಷಕರು ಕುರ್ಚಿ, ಚೇರ್‌ಗಳನ್ನು ಮುರಿದು ವೇದಕೆಯತ್ತ ಎಸೆದರು. ನೂತನ ವಧು-ವರರು ಆಸೀನರಾಗಿದ್ದ ಸ್ಥಳಕ್ಕೆ ನುಗಿದ್ದ ಯುವಕರು ತೀವ್ರ ಗದ್ದಲ ಉಂಟು ಮಾಡಿದರು, ಇದರಿಂದ ಕುಳಿತಿದ್ದ ವಧು-ವರರು ಅಲ್ಲಿಂದ ಪೇರಿ ಕಿತ್ತರು.
ಲಿಂಗಸ್ಗೂರು (ನ.27): ಶಾಸಕ ಮಾನಪ್ಪ ವಜ್ಜಲ್ ಸುಪುತ್ರನ ಮದುವೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಚಿತ್ರನಟಿ ರಾಧಿಕಾ, ಯಶ್ ದಂಪತಿಗಳನ್ನು ಕಣ್ಮುಂಬಿಕೊಳ್ಳಲು ಆಗಮಿಸಿದ ಯಶ್ ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಹಸೆಮಣೆ ಹೇರಿದ್ದ ನೂತನ ವಧು-ವರರು ತೊಂದರೆ ಅನುಭವಿಸಿದರು. ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲಿ ಶಾಸಕ ವಜ್ಜಲ್ ಸುಪುತ್ರ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಆರಂಭದಲ್ಲಿ ಮಾಜಿ ಪ್ರದಾನಿ ದೇವೇಗೌಡರ ವೇದಿಕೆಯಲ್ಲಿ ಇರುವ ತನಕ ಎಲ್ಲವೂ ಸಾಂಗವಾಗಿ ನಡೆದಿತ್ತು. ನಂತರ ಚಿತ್ರನಟ ಯಶ್ ಅಭಿಮಾನಿಗಳು ತೀವ್ರ ಗದ್ದಲ ಉಂಟು ಮಾಡಿದರು. ರಕ್ಷಣೆಗಾಗಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಮುರಿದು ಹಾಕಿದರು. ಗದ್ದಲ ನಿಯಂತ್ರಣಕ್ಕೆ ಪೊಲೀಸರು ತೀವ್ರವಾಗಿ ಹೆಣಗಿದರು. ಬ್ಯಾರಿಕೇಡ್ ಬಿದ್ದು ಪಿಎಸ್ಐ ಓರ್ವರ ಕಾಲಿಗೆ ಪೆಟ್ಟಾಯಿತು.
ಆದರೂ ಯಶ್ ಅಭಿಮಾನಿಗಳ ವರ್ತನೆ ಎಲ್ಲೇ ಮೀರಿತು, ಶಾಸಕ ಮಾನಪ್ಪ ವಜ್ಜಲ್ ಹಾಗೂ ಸಂಘಟಕರು ಪದೇ ಪದೆ ಮನವಿ ಮಾಡಿದರು ಅಭಿಮಾನಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಇದರ ಮಧ್ಯೆ ಪ್ರೇಕ್ಷಕರು ಕುರ್ಚಿ, ಚೇರ್ಗಳನ್ನು ಮುರಿದು ವೇದಕೆಯತ್ತ ಎಸೆದರು. ನೂತನ ವಧು-ವರರು ಆಸೀನರಾಗಿದ್ದ ಸ್ಥಳಕ್ಕೆ ನುಗಿದ್ದ ಯುವಕರು ತೀವ್ರ ಗದ್ದಲ ಉಂಟು ಮಾಡಿದರು, ಇದರಿಂದ ಕುಳಿತಿದ್ದ ವಧು-ವರರು ಅಲ್ಲಿಂದ ಪೇರಿ ಕಿತ್ತರು. ಇದೇ ವೇಳೆ ಮಗುವೊಂದು ತೀವ್ರ ಗದ್ದಲದಲ್ಲಿ ಸಿಲುಕಿದ್ದರಿಂದ ಮೂರ್ಛೆ ಹೋಗಿತ್ತು, ಪೊಲೀಸರು ಎತ್ತುಕೊಂಡು ಹೋಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಇದರ ಮಧ್ಯೆ ಆಗಾ ವೇದಿಕೆಯತ್ತ ಮುರಿದ ಕುರ್ಚಿಯ ಕಾಲುಗಳ ವೇದಿಕೆಯತ್ತ ತೂರಿ ಬರುತ್ತಿದ್ದವು. ಅಲ್ಲದೇ ವೇದಿಕೆ ಬಲಭಾಗದ ಪರದೆಯನ್ನು ಹರಿದು ಹಾಕಿದರು. ಗದ್ದಲ ನಿಯಂತ್ರಣಕ್ಕೆ ಪೊಲೀಸರು ಎಷ್ಟೆಲ್ಲ ಕಸರತ್ತು ಮಾಡಿದರು ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ. ಅಭಿಮಾನಿಗಳು ಯಶ್ ಆಗಮನಕ್ಕಾಗಿ ಜೋರಾಗಿ ಕೂಗುವುದು. ಚಪ್ಪಾಳೆ, ಸಿಳ್ಳೆ ಹಾಕುತ್ತಾ ಗದ್ದಲ ಮತ್ತಷ್ಟು ಹೆಚ್ಚು ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಯುಕವರ ಪಡೆ ವೇದಿಕೆಯತ್ತ ನೂಗಿತು, ಕೊನೆಗೂ ರಾಧಿಕಾ ಹಾಗೂ ಯಶ್ ದಂಪತಿಗಳು ವೇದಿಕೆಗೆ ಬಂದರು. ನೂತನ ವಧು-ವರರಿಗೆ ಆಶೀರ್ವದಿಸಿದ ನಂತರ ಯಶ್ ಮಾತನಾಡಿ, ಇಲ್ಲಿನ ಯುಕವರು ಹೊಂದಿರುವ ಅಭಿಮಾನ, ಪ್ರೀತಿ, ವಿಶ್ವಾಸ ಯಾವ ಜನುಮದ ಋಣಾನು ಬಂಧ ಗೊತ್ತಿಲ್ಲ, ನಿಮ್ಮ ಪ್ರೀತಿ, ವಾತ್ಸಲ್ಯಕ್ಕೆ ಅಭಾರಿಯಾಗಿದ್ದೇನೆ, ನಿಮ್ಮನ್ನು ಭೇಟಿಯಾಗಲು ಆಗಾಗ ಬರುತ್ತೇನೆ ಎಂದು 5 ನಿಮಿಷದಲ್ಲಿ ಮಾತು ಮುಗಿಸಿದರು.
ಇಷ್ಟೋತ್ತಿಗಾಗಲೇ ಪರಿಸ್ಥಿತಿ ಕೈ ಮೀರಿತ್ತು. ಪೊಲೀಸರು ಹಾಗೂ ಸಂಘಟಕರು ಮೂಕ ಪ್ರೇಕ್ಷಕರಾದರು. ಒಂದೆಡರು ನಿಮಿಷ ರಾಧಿಕಾ ಮಾತನಾಡಿದ ನಂತರ ವೇದಿಕೆ ಇಳಿದು ಹೊರಟರು. ಹತ್ತು ನಿಮಿಷದ ಭೇಟಿಗೆ ಆಗಮಿಸಿದ್ದ ಯಶ್ನ ಅಭಿಮಾನಿಗಳ ಅತಿರೇಕದಲ್ಲಿ ಶಾಸಕ ವಜ್ಜಲ್ರು ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಅಲ್ಲೋಲ್ಲ, ಕಲ್ಲೋಲವಾಯಿತು.
ಹೆಲಿಪ್ಯಾಡ್ನಲ್ಲೂ ಚಿತ್ರನಟ ಯಶ್ರನ್ನು ನೋಡಲು ಬಂದಿದ್ದ ಯುವಕರು ಅಲ್ಲಿಯೂ ಗದ್ದಲ ಉಂಟು ಮಾಡಿದರು. ಪೊಲೀಸರು ಲಾಠಿ ರುಚಿ ತೋರಿಸಿದರು ಬಗ್ಗದ ಅಭಿಮಾನಿಗಳು ಪೊಲೀಸರು ಹಾಕಿದ್ದ ಬ್ಯಾರಿಕೇಡ್'ಗಳನ್ನು ನೆಲ್ಲಕ್ಕುರುಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಜನತೆ ಸಾಮೂಹಿಕ ವಿವಾಹ ಸಮಾರಂಭದ ದಿಕ್ಕನ್ನೇ ಬದಲಿಸಿ ಆಯೋಜಕರು ಅವಾಕ್ಕಾಗುವಂತೆ ಮಾಡಿದರು. ನಟ ಯಶ್, ರಾಧಿಕಾ ವೇದಿಕೆ ಬರುತ್ತಿದ್ದಂತೆ ವೇದಿಕೆಯು ಜನರಿಂದ ತುಂಬಿ ತುಳುಕಿತು. ಸುಂದರ ಹಾಗೂ ಭವ್ಯವಾಗಿ ಆಯೋಜಿಸಿದ್ದ ವಿವಾಹ ಸಮಾರಂಭವನ್ನು ಯಶ್ ಅಭಿಮಾನಿಗಳ ಅತಿರೇಕದ ವರ್ತನೆಗೆ ಅಪೋಶನವಾಯಿತು.
