Asianet Suvarna News Asianet Suvarna News

ನಟ ವಿಜಯ್​​ಗೆ ಮಾತ್ರ ಏಕೆ ಲೈಫ್​ ಜಾಕೆಟ್​​...? ಉದಯ್​-ಅನಿಲ್​ ಸಾವಿಗೆ ಯಾರು ಹೊಣೆ...?

ಅನಿಲ್​ ಮತ್ತು ಉದಯ್ ಧುಮುಕಿದ ನಂತರ ಜಿಗಿಯೋದು ನಟ ದುನಿಯಾ ವಿಜಯ್​, ಇಲ್ಲಿ ಗಮನಿಸಿ ದುನಿಯಾ ವಿಜಯ್​ ಶರ್ಟ್​​ ಒಳಗೆ ಲೈಫ್ ಜಾಕೆಟ್ ಹಾಕಿದ್ದಾರೆ. ಯೆಸ್.... ಇದನ್ನೆಲ್ಲ ನೋಡಿದ್ರೆ ನಟ ವಿಜಯ್​​ಗೆ ಮಾತ್ರ ಏಕೆ ಲೈಫ್​ ಜಾಕೆಟ್​​?... ಕಿರಿಯ ಕಲಾವಿದರ ಜೀವನಕ್ಕೆ ಬೆಲೆಯೇ ಇಲ್ಲವೆ?... ಉದಯ್​-ಅನಿಲ್​ ಸಾವಿಗೆ ಯಾರು ಹೊಣೆ? ಅನ್ನೋ ಪ್ರಶ್ನೆಗಳು ಹೇಳದೇ ಇರಲ್ಲ. 

Actor Vijay is the only Life Jacket Why

ಬೆಂಗಳೂರು(ನ.08): ನಿನ್ನೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ದುರಂತ ನಡೆದುಹೋಗಿದೆ. ಬದುಕಿ ಬಾಳಬೇಕಿದ್ದ ಇಬ್ಬರ ಜೀವನ ಜಲಸಮಾಧಿಯಾಗಿ ಹೋಗಿದೆ. ಎಲ್ಲವೂ ನಿಯಮಬದ್ಧ ಮತ್ತು ಮುಂಜಾಗ್ರತೆಯಾಗಿ ನಡೆದಿದ್ದರೆ ಇಂಥ ದುರಂತ ನಡೆಯುತ್ತಿರಲಿಲ್ಲ. 

ಆದರೆ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್​ ಫೈಟಿಂಗ್​ ಚಿತ್ರೀಕರಣದಲ್ಲಿ ಆಗಬಾರದ್ದು ಆಗಿ ಹೋಗಿದೆ. ಹೀರೋಗೆ ಮಾತ್ರ ಲೈಫ್​ ಜಾಕೆಟ್ ಆಗಿ ಕಿರಿಯ ಕಲಾವಿದರನ್ನು ನಿರ್ಲಕ್ಷಿಸಿದ್ದರಿಂದ ಅವರ ಜೀವವೇ ಜಲಸಮಾಧಿಯಾಗಿ ಹೋಗಿದೆ.

ಮಾಸ್ತಿಗುಡಿ ಸಿನಿಮಾದ ಈ ಚಿತ್ರೀಕರಣದಲ್ಲಿ ಹೀರೋ ದುನಿಯಾ ವಿಜಯ್​ ಹೆಲಿಕಾಪ್ಟರ್​ನಲ್ಲಿ ಕೂತು ವಿಲನ್​ಗಳಾದ ಅನಿಲ್​ ಮತ್ತು ಉದಯ್​​ನನ್ನು ತಳ್ಳೋ ದೃಶ್ಯವನ್ನು ಸೆರೆ ಹಿಡಿಯಲಾಗ್ತಿತ್ತು. ನೀವು ಗಮನಿಸಿರಬೇಕು... ಇಲ್ಲಿ ಉದಯ್ ಮತ್ತು ಅನಿಲ್​ ಇಬ್ಬರಿಗೂ ಲೈಫ್​ ಜಾಕೆಟ್​ ಇಲ್ಲ.

ಅನಿಲ್​ ಮತ್ತು ಉದಯ್ ಧುಮುಕಿದ ನಂತರ ಜಿಗಿಯೋದು ನಟ ದುನಿಯಾ ವಿಜಯ್​, ಇಲ್ಲಿ ಗಮನಿಸಿ ದುನಿಯಾ ವಿಜಯ್​ ಶರ್ಟ್​​ ಒಳಗೆ ಲೈಫ್ ಜಾಕೆಟ್ ಹಾಕಿದ್ದಾರೆ. ಯೆಸ್.... ಇದನ್ನೆಲ್ಲ ನೋಡಿದ್ರೆ ನಟ ವಿಜಯ್​​ಗೆ ಮಾತ್ರ ಏಕೆ ಲೈಫ್​ ಜಾಕೆಟ್​​?... ಕಿರಿಯ ಕಲಾವಿದರ ಜೀವನಕ್ಕೆ ಬೆಲೆಯೇ ಇಲ್ಲವೆ?... ಉದಯ್​-ಅನಿಲ್​ ಸಾವಿಗೆ ಯಾರು ಹೊಣೆ? ಅನ್ನೋ ಪ್ರಶ್ನೆಗಳು ಹೇಳದೇ ಇರಲ್ಲ. 

ಹೆಲಿಕಾಪ್ಟರ್​ನಲ್ಲಿದ್ದ ಮೂವರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕ ಬೀಳ್ತಿದ್ದಂತೆ ಉದಯ್ ಮತ್ತು ಅನಿಲ್ ಈಜುಲ ಬಾರದೆ ಮುಳುಗ್ತಿದ್ರೆ ದುನಿಯಾ ವಿಜಯ್​ ಮಾತ್ರ ಲೈಫ್​ ಜಾಕೆಟ್​ ಇದ್ದಿದ್ದರಿಂದ ಸೇಫ್​ ಆಗಿ ಈಜುತ್ತ ದಡ ಸೇರಿದರು.
ಇನ್ನೊಂದೆಡೆ ಲೈಫ್​ ಜಾಕೆಟ್​ ಇಲ್ಲದೆ ನೀರಿನಲ್ಲಿ ಮುಳುಗುತ್ತಿದ್ದ ಉದಯ್ ಮತ್ತು ಅನಿಲ್​ ನನ್ನು ರಕ್ಷಿಸಲು ಬರಬೇಕಾದ ಬೋಟ್​ ಕೂಡಾ ಕೆಟ್ಟು ನಿಂತಿತ್ತು.

ಇಲ್ಲಿ ಎದ್ದು ಕಾಣ್ತಿರೋದು ಭದ್ರತೆ ಬಗ್ಗೆ ಚಿತ್ರ ತಂಡ, ವಿಶೇಷವಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಸಾಹಸ ನಿರ್ದೇಶಕನ ನಿರ್ಲಕ್ಷ್ಯ.

ಹೀರೋ ದುನಿಯಾ ವಿಜಯ್​ಗೆ ಮಾತ್ರ ಲೈಫ್​ ಜಾಕೆಟ್ ಹಾಕಿ.. ಜೂನಿಯರ್ ಕಲಾವಿದರಾದ ಉದಯ್​ ಮತ್ತು ಅನಿಲ್​​ಗೆ ಲೈಫ್​ ಜಾಕೆಟ್ ಹಾಕಲಾಗದೆ ನಿರ್ಲಕ್ಷಿಸಿದ್ದು ಎಷ್ಟು ಸರಿ.? ಇನ್ನೊಂದು ವಿಷ್ಯಾ ಅಂದ್ರೆ ಶೂಟಿಂಗ್​​ಗೂ ಮೊದಲೇ ಇಬ್ಬರೂ ಕಲಾವಿದರು ನಮಗೆ ನೀರಂದ್ರೆ ಭಯ, ಸರಿಯಾಗೇ ಈಜಕ್ಕೂ ಬರಲ್ಲ ಎಂದಿದ್ರು.

ಇಷ್ಟೆಲ್ಲಾ ಗೊತ್ತಿದ್ರೂ ಅದ್ಯಾವ ಭಂಡಧೈರ್ಯದ ಮೇಲೆ ಉದಯ್ ಮತ್ತು ಅನಿಲ್​​ರನ್ನು ಹೆಲಿಕಾಪ್ಟರ್​ನಿಂದ ದುಮುಕಿಸುವ ದುಸ್ಸಾಹಸಕ್ಕೆ ಕೈಹಾಕಿದರೋ ಆ ದೇವರೇ ಬಲ್ಲ. ಇನ್ನು ತನ್ನ ಮಗನ ಸಾವಿನ ಆಘಾತದಿಂದ ಉದಯ್​ ತಾಯಿ ಚಿತ್ರತಂಡ ಮತ್ತು ದುನಿಯಾ ವಿಜಯ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಚಿತ್ರತಂಡದ ನಿರ್ಲಕ್ಷ್ಯದಿಂದ ಬದುಕಿ ಬಾಳಬೇಕಿದ್ದ ಉದಯ್​ ಮತ್ತು ಅನಿಲ್​ ಇಹಲೋಕ ತ್ಯಜಿಸಿದ್ದಾರೆ. ಇವರಿಬ್ಬರ ಕುಟುಂಬದ ಆಗಿರುವ ನೋವನ್ನು ಯಾವ, ಎಷ್ಟು ಪರಿಹಾರ ಕೊಟ್ಟರೆ ತಾನೇ ತುಂಬಬಲ್ಲದು.. ಕಿರಿಯ ಕಲಾವಿದರ ಜೀವನಕ್ಕೆ ಬೆಲೆಯೇ ಇಲ್ಲವೇ...?

Follow Us:
Download App:
  • android
  • ios