ಕಾಲಿವುಡ್ ಬೆಡಗಿ ತ್ರಿಶಾ ಕೃಷ್ಣನ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಪ್ರಾಣಿದಯಾ ಸಂಘದ ಪೇಟಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನವದೆಹಲಿ (ಜ.14): ಕಾಲಿವುಡ್ ಬೆಡಗಿ ತ್ರಿಶಾ ಕೃಷ್ಣನ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಪ್ರಾಣಿದಯಾ ಸಂಘದ ಪೇಟಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟೆಲ್ಲಾ ಕೋಪಕ್ಕೆ ಕಾರಣವಾಗಿದ್ದು ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲೆ ಸುಪ್ರೀಂಕೋರ್ಟ್ ನಿಷೇಧ ಹೇರಿದ್ದು. ಇದರಲ್ಲಿ ಪೇಟಾ ಪಾತ್ರ ಪ್ರಮುಖವಾದದ್ದು ಎಂಬುದು ತಮಿಳರ ವಾದ. ಬೀದಿ ನಾಯಿಗಳನ್ನು ದತ್ತು ಪಡೆದು ಸಾಕುವಂತೆ ಪೇಟಾ ಜಾಹಿತಾರಿನಲ್ಲಿ ತ್ರಿಶಾ ಕಾಣಿಸಿಕೊಂಡಿದ್ದರು. ಈಕೆ ಕೂಡಾ ಪೇಟಾದ ಸದಸ್ಯೆ ಎಂದು ಭಾವಿಸಿರುವ ತಮಿಳರು ಶಿವಗಂಗಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ತ್ರಿಷಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.