ಮೈಸೂರು, (ಸೆ.24): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾರ್ ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಈಗ ಹೇಗಿದ್ದಾರೆ? ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಯಾವಾಗ? ಎನ್ನುವುದನ್ನು ದರ್ಶನ್ ಅವರ ಕುಚುಕು  ಗೆಳೆಯ ಸೃಜನ್ ಲೋಕೇಶ್ ಮಾಹಿತಿ ನೀಡಿದ್ದಾರೆ. 

ಸೃಜನ್ ಲೋಕೇಶ್ ಕೋಲಂಬಿಯಾ ಆಸ್ಪತ್ರೆಗೆ ದೌಡಾಯಿಸಿ, ಗಾಯಗೊಂಡಿರುವ ಸ್ನೇಹಿತನ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೃಜನ್, ಆ್ಯಕ್ಸಿಡೆಂಟ್ ನಮಗೆ ಗೊತ್ತಿಲ್ಲದೆ ಆಗೋದು. ದೇವರ ದಯದಿಂದ ಯಾರಿಗೂ ಏನು ಆಗಿಲ್ಲ ಎಂದರು.

ದರ್ಶನ್ ಅಪಘಾತದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ. ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ. ಈಗಾಗಲೇ ಎಲ್ಲ ಸರ್ಜರಿ ಮುಗಿದಿದ್ದು, ನಾಳೆ [ಮಂಗಳವಾರ] ರಾತ್ರಿ ಅಥವಾ ನಾಡಿದ್ದು [ಬುಧವಾರ] ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ.  ಇನ್ನು ಪ್ರಜ್ವಲ್ ಮತ್ತು ದೇವರಾಜು ನಾಳೆ [ಮಂಗಳವಾರ] ಬೆಳಗ್ಗೆ ವೇಳೆಗೆ ಡಿಸ್ಚಾರ್ಜ್ ಆಗುತ್ತಾರೆ ಎಂದು ಸೃಜನ್ ಮಾಹಿತಿ ನೀಡಿದರು.

 ಸೋಮವಾರ ನಸುಕಿನ ವೇಳೆ ಮೈಸೂರು ಬಳಿ ದರ್ಶನ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ದರ್ಶನ್, ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಗಾಯಗೊಂಡಿದ್ದು, ಕೋಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಪಘಾತಕ್ಕೀಡಾದ ದರ್ಶನ್ ಅವರ ಕಾರ್ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.