ನಟಿ ತೆರಳುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಅವರು ತೆರಳುತ್ತಿದ್ದ ಕಾರಿಗೆ ಇಬ್ಬರು ಯುವಕರು ಬಂದು ಬೈಕ್ ನಲ್ಲಿ ಗುದ್ದಿ ಪರಿಣಾಮವಾಗಿ ಕಾರಿನ ಗಾಜು ಸಂಪೂರ್ಣ ಪುಡಿ ಪುಡಿಯಾಗಿ ನಟಿಯೂ ಕೂಡ ಗಾಯಗೊಂಡಿದ್ದಾರೆ.
ಮುಂಬೈ : ಪ್ರಸಿದ್ಧ ಸೀರಿಯಲ್ ನಟಿ ರೂಪಾಲಿ ಗಂಗೂಲಿ ಅವರ ಕಾರು ಅಪಘಾತಕ್ಕೆ ಈಡಾದ ಘಟನೆ ಸೋಮವಾರ ನಡೆದಿದೆ. ರೂಪಾಲಿ ತೆರಳುತ್ತಿದ್ದ ಕಾರಿಗೆ ಇಬ್ಬರು ಬೈಕ್ ನಲ್ಲಿ ಬಂದ ಯುವಕರು ಉದ್ದೇಶಪೂರ್ವಕವಾಗಿ ಡಿಕ್ಕಿ ಮಾಡಿದ್ದಾರೆ.
ಅಲ್ಲದೇ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ತಮ್ಮ 5 ವರ್ಷದ ಪುತ್ರನ ಮುಂದೆಯೇ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಅಕಾಸ್ಮಾತ್ ಆಗಿ ತಾವು ತೆರಳುತ್ತಿದ್ದ ಕಾರು ಬೈಕ್ ಗೆ ಸ್ವಲ್ಪ ತಾಗಿದ್ದು ಇದರಿಂದ ರೊಚ್ಚಿಗೆದ್ದ ಬೈಕ್ ಸವಾರರು ತಮ್ಮ ಕಾರಿನ ಗಾಜಿಗೆ ಗುದ್ದಿ ಒಡೆದಿದ್ದಾಗಿ ಹೇಳಿದ್ದಾರೆ.
ತಾವು ಈ ಬಗ್ಗೆ ಕ್ಷಮೆ ಯಾಚಿಸಿದರೂ ಕೂಡ ಈ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಕಾರಿನ ಗಾಜು ಸಂಪೂರ್ಣವಾಗಿ ಒಡೆದಿದ್ದು, ಈ ವೇಳೆ ತಾವು ಗಾಯಗೊಂಡಿದ್ದಾಗಿ ರೂಪಾಲಿ ಹೇಳಿದ್ದಾರೆ.
ಇನ್ನು ಈ ಸಂಬಂಧ ತಕ್ಷಣವೇ ಅವರು ವರ್ಸೋವಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ತಕ್ಷಣವೇ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು ಈ ನಿಟ್ಟಿನಲ್ಲಿ ಮುಂಬೈ ಪೊಲೀಸರಿಗೆ ಧನ್ಯವಾದ ಎಂದು ಹೇಳಿಕೊಂಡಿದ್ದಾರೆ.
