ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

First Published 27, Feb 2018, 11:34 AM IST
Actor Prakash Raj files Defamation case against BJP MP Pratap Simha
Highlights

ಬಹುಭಾಷಾ ನಟ ಪ್ರಕಾಶ್ ರೈ ಅವರು ಸಂಸದ ಪ್ರತಾಪ್‌ಸಿಂಹ ಅವರ ವಿರುದ್ಧ ಇಂದು  ಮೈಸೂರು ನ್ಯಾಯಾಲಯದಲ್ಲಿ 1ರು.ರಷ್ಟು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಮೈಸೂರು: ಬಹುಭಾಷಾ ನಟ ಪ್ರಕಾಶ್ ರೈ ಅವರು ಸಂಸದ ಪ್ರತಾಪ್‌ಸಿಂಹ ಅವರ ವಿರುದ್ಧ ಇಂದು  ಮೈಸೂರು ನ್ಯಾಯಾಲಯದಲ್ಲಿ 1ರು.ರಷ್ಟು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ನಟ ಪ್ರಕಾಶ್ ಆರಂಭಿಸಿರುವ ‘ಜಸ್ಟ್ ಆಸ್ಕಿಂಗ್’ ಚಳವಳಿಯ ಭಾಗವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಎತ್ತಿದ್ದ ಪ್ರಶ್ನೆಗಳಿಗೆ ಸಂಸದ ಪ್ರತಾಪಸಿಂಹ ತಮ್ಮ ಅಂಕಣ ಬರಹ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರೈ ಒತ್ತಾಯಿಸಿದ್ದರು.

ಇದುವರೆಗೆ ಸಂಸದ ಪ್ರತಾಪಸಿಂಹ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕಾಶ್ ರೈ ಅವರು ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.

loader