ಚಿರನಿದ್ರೆಗೆ ಚಾಂದಿನಿ; ಇಹಲೋಕದಿಂದ ಮರೆಯಾದ ಅತಿಲೋಕ ಸುಂದರಿ

First Published 28, Feb 2018, 3:46 PM IST
Actor begins her last journey  draped in Tricolour
Highlights

ಬಾಲಿವುಡ್ ’ಚಾಂದನಿ’ ಶ್ರೀದೇವಿಯ ಬಾಳ ಪಯಣ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ ಅತಿಲೋಕ ಸುಂದರಿ. ಅಂತಿಮ ಸಂಸ್ಕಾರ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.ವಿಲೇ ಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ನಡೆಯಲಿದೆ.

ನವದೆಹಲಿ (ಫೆ. 28): ಬಾಲಿವುಡ್ ’ಚಾಂದನಿ’ ಶ್ರೀದೇವಿಯ ಬಾಳ ಪಯಣ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ ಅತಿಲೋಕ ಸುಂದರಿ. ಅಂತಿಮ ಸಂಸ್ಕಾರ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.ವಿಲೇ ಪಾರ್ಲೆ ಸೇವಾ ಸಮಾಜ ಚಿತಾಗಾರದಲ್ಲಿ ನಡೆಯಲಿದೆ.

ಪತಿ ಬೋನಿ ಕಪೂರ್, ಮಗಳು ಜಾಹ್ನವಿ, ಖುಷಿ ಸೇರಿದಂತೆ ಕುಟುಂಬದವರು, ಬಾಲಿವುಡ್ ನಟ, ನಟಿಯರು ಎಲ್ಲರೂ ಸ್ಥಳದಲ್ಲಿ ನೆರೆದಿದ್ದಾರೆ. ಅಯ್ಯಂಗಾರ್ ಪ್ರಕಾರ ಅಂತಿಮ ವಿಧಿ ವಿಧಾನ ನಡೆಯಲಿದೆ. ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಸಕಲ ಸರ್ಕಾರಿ ಗೌರವ ನೀಡಲಾಯಿತು.  ಶ್ರೀದೇವಿಯವರ ಅಚ್ಚುಮೆಚ್ಚಿನ ಕೆಂಪು ಬಣ್ಣದ ಕಾಂಜೀವರಂ ಸೀರೆಯನ್ನು ಹೊದಿಸಲಾಗಿದೆ.  ಹಣೆಗೆ ಕೆಂಪು ಕುಂಕುಮ,  ಕೊರಳಿಗೆ ಮುತ್ತಿನ ಹಾರ,  ಮುಡಿಯಲ್ಲಿ ಮಲ್ಲಿಗೆ ಹೂವಿನ ಮಾಲೆ,  ತುಟಿಗೆ ಕೆಂಪು ಬಣ್ಣದ ಲಿಪ್​ಸ್ಟಿಕ್​, ಕೊರಳಲ್ಲಿ ಮಾಂಗಲ್ಯ ಸರ ಹಾಕಿ ಸಿಂಗರಿಸಲಿದ್ದಾರೆ. 
 

loader