ನವದೆಹಲಿ(ಅ.07): ಉರಿ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್'ಗೆ ಸಾಕ್ಷಿ ಕೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರಿಗೆ ನಟ ಅಕ್ಷಯ್ ಕುಮಾರ್ ಖಡಕ್ ಉತ್ತರ ಕೊಟ್ಟಿದ್ದಾರೆ. 

ಇಲ್ಲದೇ ಬಾಲಿವುಡ್ ನಲ್ಲಿ ಪಾಕ್ ನಟರನ್ನು ನಿಷೇಧಿಸುವ ಕುರಿತು ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರುವವರಿಗೂ ನಟ ಅಕ್ಷಯ್ ಮಾತಿನ ಚಾಟಿ ಬೀಸಿದ್ದಾರೆ.

ಟ್ವೀಟರ್ ನಲ್ಲಿ ವಿಡಿಯೋ ಒಂದನ್ನು ಹಾಕಿರು ಅಕ್ಷಯ್, ಸುಮ್ಮನೆ ಕಿತ್ತಾಟ, ಟೀಕೆಗಳನ್ನೆಲ್ಲಾ ನಿಲ್ಲಿಸಿ ಹುತಾತ್ಮ ಯೋಧರ ಕುಟುಂಬಗಳ ಬಗ್ಗೆ ಹಾಗೂ ಗಡಿಯಲ್ಲಿ ದೇಶ ಕಾಯುವ ಸೈನಿಕರ ಬಗ್ಗೆ ಚಿಂತಿಸಿ, ನಿಮ್ಮ ಈ ಮಾತುಗಳು ಯಾರಿಗೂ ರುಚಿಸುತ್ತಿಲ್ಲ ಎಂದಿದ್ದಾರೆ. 

ನಮ್ಮ ಸೈನಿಕ ಇದ್ದರೆ ಮಾತ್ರ ನಾವು-ನೀವು ಅವರ ವಿಷಯದಲ್ಲಿ ರಾಜಕೀಯ ಮಾಡಿ ನಿಮ್ಮ ಬೇಳೆ ಬೇಯಿಸಿಕೊಳ್ಳ ಬೇಡಿ ಎಂದಿರುವ ಅಕ್ಷಯ್. ದಾಳಿ ಮಾಡಿದ ಯೋಧರ ಬಗ್ಗೆ ಗೌರವ ತೋರಿ ಎಂದು ಮನವಿ ಮಾಡಿದ್ದಾರೆ.