ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಆರೋಪಿ ರತ್ನಾಕರ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಆರೋಪಿ ರತ್ನಾಕರ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.
ಪುತ್ತೂರು ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷನಾಗಿರುವ ರತ್ನಾಕರ ಶೆಟ್ಟಿ ಕಲ್ಲಡ್ಕದಲ್ಲಿ ನಡೆದ ಘರ್ಷಣೆ ವೇಳೆ ಖಲೀಲ್ ಎಂಬಾತನಿಗೆ ಹಲ್ಲೆ ನಡೆಸಿದ ಆರೋಪವಿತ್ತು .ಈ ಸಂಬಂಧ ರತ್ನಾಕರ್ ಶೆಟ್ಟಿ ಮೇಲೆ ಪ್ರಕರಣ ದಾಖಲಾಗಿತ್ತು.
ಘರ್ಷಣೆಯಲ್ಲಿ ಗಾಯಗೊಂಡಿದ್ದ ಕಾರಣ ಈತನಿಗೆ ಪೊಲೀಸ್ ಕಾವಲಿನಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು .
ತಡರಾತ್ರಿ ಪೋಲೀಸರು ನಿದ್ದೆಗೆ ಜಾರಿದ್ದ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಪುತ್ತೂರು ಮತ್ತು ಬಂಟ್ವಾಳ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಮೂವರು ಪೊಲೀ ಅಮಾನತು:
ಈ ಸಂಬಂಧ ಕರ್ತವ್ಯ ಲೋಪದ ಆರೋಪದಡಿ ಪುತ್ತೂರು ನಗರ ಠಾಣೆ ಪಿಎಸ್ಸೈ ಓಮನಾ, ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ಹಾಗೂ ಪೇದೆ ರಮೇಶ್ ಲಮಾಣಿ ಅಮಾನತಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಮೂವರನ್ನು ಅಮಾನತು ಮಾಡಿದ್ದಾರೆ.
