. ಸಿಎಂ ಆಗಮಿಸುತ್ತಿದ್ದ ಕಾಪ್ಟರ್‌ ಇಳಿಯಲು ಅನುಕೂಲವಾಗುವಂತೆ ಸೂಚನೆ ನೀಡಲು ಹೆಲಿಪ್ಯಾಡ್‌ನಲ್ಲಿ ಆ್ಯಶ್‌ ಕ್ಯಾಂಡಲ್‌ ಇಡಲಾಗಿತ್ತು
ವಿಜಯಪುರ(ಮೇ.08): ಸಿದ್ದರಾಮಯ್ಯಅವರಿದ್ದ ಹೆಲಿಕಾಪ್ಟರ್ ವಿಜಯಪುರ ಸೈನಿಕ ಶಾಲೆ ಹೆಲಿಪ್ಯಾಡ್ಗೆ ಬಂದಿಳಿಯುವ ವೇಳೆ ಕೇವಲ 50 ಅಡಿ ದೂರದಲ್ಲೇ ಒಣ ಹುಲ್ಲಿಗೆ ಬೆಂಕಿ ತಗುಲಿದ ಘಟನೆ ನಡೆಯಿತು. ಸಿಎಂ ಆಗಮಿಸುತ್ತಿದ್ದ ಕಾಪ್ಟರ್ ಇಳಿಯಲು ಅನುಕೂಲವಾಗುವಂತೆ ಸೂಚನೆ ನೀಡಲು ಹೆಲಿಪ್ಯಾಡ್ನಲ್ಲಿ ಆ್ಯಶ್ ಕ್ಯಾಂಡಲ್ ಇಡಲಾಗಿತ್ತು. ಅದರಲ್ಲಿನ ಬೆಂಕಿಯ ಕಿಡಿಯೊಂದು ಒಣ ಹುಲ್ಲಿನ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ.
