ಕೋಲಾರ (ಡಿ. 02): ಕಾರು ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಮಗು ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ತಿರುಪತಿಯ ರೇಣುಗುಂಟ ಸಮೀಪದ ಮಾಮಂಡೂರು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಡಪದಿಂದ ಚೆನ್ನೈಗೆ ಪೌಡರ್ ತುಂಬಿದ ಲಾರಿ ಹೋಗುತ್ತಿತ್ತು.  ಕುವೈತ್ ನಿಂದ ಭಾರತಕ್ಕೆ ಬಂದ ತಮ್ಮನ ಕುಟುಂಬದವರನ್ನು ಕಾರಿನಲ್ಲಿ ಕರೆದುಕೊಂಡು ಕಡಪಗೆ ಕರೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ. 

ಮೃತರೆಲ್ಲರೂ ಕಡಪಗೆ ಸೇರಿದವರು. ಗಂಗಾಧರ (35 ವರ್ಷ), ವಿಜಯಮ್ಮ  (30 ವರ್ಷ),  ಪ್ರಸನ್ನ (32 ವರ್ಷ), ಮರಿಯಮ್ಮ  (25 ವರ್ಷ)  ಹಾಗೂ ಒಂದೂವರೆ ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ತಿರುಪತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.