ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ವ್ಯಾಸರಾಜಪುರದಲ್ಲಿ ಭೀಕರ ಅಪಘಾತ ಸಂಭವಿಸಿದೆ. 5 ವರ್ಷದ ಮಗುವಿನ ಮೇಲೆ ಲಾರಿ ಹರಿದು ಮಗುವು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಟಿ.ನರಸೀಪುರ(ಡಿ.16): ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ವ್ಯಾಸರಾಜಪುರದಲ್ಲಿ ಭೀಕರ ಅಪಘಾತ ಸಂಭವಿಸಿದೆ. 5 ವರ್ಷದ ಮಗುವಿನ ಮೇಲೆ ಲಾರಿ ಹರಿದು ಮಗುವು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮಗು ರಸ್ತೆ ದಾಟುವಾಗ ಏಕಾ ಏಕಿ ಬಂದ ಲಾರಿಯು ಮಗುವಿನ ಮೇಲೆ ಹರಿದಿದೆ. ಇದರಿಂದ ಮಗುವಿನ ದೇಹ ಸಂಪೂರ್ಣವಾಗಿ ಛಿದ್ರವಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.