ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದು ಮದ್ದೂರು ತಾ.ಮಾಚಳ್ಳಿ ತೊರೆಶೆಟ್ಟಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮಂಡ್ಯ (ಅ.29): ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದು ಮದ್ದೂರು ತಾ.ಮಾಚಳ್ಳಿ ತೊರೆಶೆಟ್ಟಹಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಪಾರ್ವತಮ್ಮ, ಬೋರಮ್ಮ, ಜಯಮ್ಮ, ಮಾದಮ್ಮ, ಶಿವಣ್ಣ, ಸಣ್ಣಮ್ಮ, ಬೀರಮ್ಮ, ಮೃತ ದುರ್ದೈವಿಗಳು.ಉಳಿದವರ ಹೆಸರು ಪತ್ತೆಯಾಗಿಲ್ಲ.

ಘಟನೆಯಲ್ಲಿ 30 ಜನರಿಗೆ ಗಾಯಗೊಂಡಿದ್ದು ಗಾಯಾಳುಗಳನ್ನು ಮದ್ದೂರು‌ ಮತ್ತು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮದ್ದೂರಿನ ಅವಸರನಹಳ್ಳಿಯಿಂದ ಮದ್ದೂರಿನ ಕಲ್ಯಾಣ ಮಂಟಪಕ್ಕೆ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಚಾಲಕ ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.