ಕೋಲಾರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರ ಸಾವು

news | Saturday, January 13th, 2018
Suvarna Web Desk
Highlights

ಇಂದು ರಾಜ್ಯದ ವಿವಿಧೆಡೆ ಅಪಘಾತ ಸಂಭವಿಸಿದ್ದು, ಸಾವಿನ ಶನಿವಾರವಾಗಿದೆ. ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ

ಕೋಲಾರ (ಜ.13): ಇಂದು ರಾಜ್ಯದ ವಿವಿಧೆಡೆ ಅಪಘಾತ ಸಂಭವಿಸಿದ್ದು, ಸಾವಿನ ಶನಿವಾರವಾಗಿದೆ. ಕೋಲಾರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಮರಕ್ಕೆ ಆಟೋ ಡಿಕ್ಕಿಯಾಗಿ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಾಜಲಬಾವಿ ಸಮೀಪದಲ್ಲಿ  ಘಟನೆ ನಡೆದಿದೆ.

ಮೃತರೆಲ್ಲರೂ ಕೂಡ ಬಂಗಾರಪೇಟೆಯ ಸಣ್ಣಕುಪ್ಪಂ ಗ್ರಾಮದವರು ಎನ್ನಲಾಗಿದೆ. ಮೃತರನ್ನು ಭಾಸ್ಕರ್, ಪಾರ್ವತಮ್ಮ, ಗೌರಮ್ಮ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಳುಬಾಗಿಲು ಹಾಗೂ ಕೋಲಾರ ಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲರೂ ಕೂಡ ಕುಟುಂಬ ಸಮೇತರಾಗಿ ಖಾದ್ರಿಪುರ ಶನಿದೇವಾಲಯಕ್ಕೆ ಹೋಗಿ ಬರುವಾಗ ಈ ಭೀಕರ ಅಪಘಾತ ಸಂಭವಿಸಿದೆ.

Comments 0
Add Comment

    ಮಾನವೀಯ ಮರೆತ ಜನ :ಮಕ್ಕಳ ಕಳ್ಳನೆಂದು ಹಲ್ಲೆಗೀಡದ ವ್ಯಕ್ತಿ ಸಾವು

    news | Wednesday, May 23rd, 2018