ಬೆಂಗಳೂರು(ಸೆ.19): ಪರಸ್ಪರ ಚುಂಬಿಸುತ್ತಾ ವಾಹನ ಚಾಲನೆ ಮಾಡಿದ ಯುವತಿ ಸರಣಿ ಅಪಘಾತ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.
ಶಾಲಿನಿ ಎಂಬ ಯುವತಿ ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿ ತನ್ನ ಇಬ್ಬರು ಸ್ನೇಹಿತೆಯೊಂದಿಗೆ ಹೋಂಡಾ ಸಿಟಿ ಕಾರಿನಲ್ಲಿ ಬರುತ್ತಿದ್ದಳು. ಈ ವೇಳೆ ಒಂದು ಸ್ವಿಫ್ಟ್ ಕಾರು ಮತ್ತು ಒಂದು ಬೈಕ್'ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾಳೆ. ಇದೇ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಫರ್ಹಾನ್ ಎಂಬಾತ ತನ್ನ ಕಾರಿನಲ್ಲಿ ಚೇಜ್ ಮಾಡಿ ಯುವತಿಯರನ್ನು ಹಿಡಿದು, ಆರ್.ಟಿ.ನಗರ ಪೊಲೀಸರಿಗೆ ಚಾಲಕಿ ಶಾಲಿನಯನ್ನು ಒಪ್ಪಿಸಿದ್ದಾರೆ.
ಮುಂದಿನ ಸೀಟಿನಲ್ಲಿದ್ದ ಇಬ್ಬರು ಯುವತಿಯರು ಮದ್ಯಪಾನ ಮಾಡುತ್ತಿದ್ದರು. ಈ ಮೂವರು ಪರಸ್ಪರ ಚುಂಬಿಸಿಕೊಳ್ಳದಕ್ಕೆ ಹೋಗಿ ಅಪಘಾತ ಮಾಡಿದ್ದು ಇದನ್ನು ತಾನು ಕಣ್ಣಾರೆ ನೋಡಿದ್ದಾಗಿ ಫರ್ಹಾನ್ ಪೊಲೀಸರಿಗೆ ತಿಳಿಸಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಸಿಕ್ಕಿದ್ದರಿಂದ, ಆರ್.ಟಿ.ನಗರ ಸಂಚಾರಿ ಪೊಲೀಸರು ಕಾರು ಚಾಲಕಿ ಶಾಲಿನಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕುಡಿತದ ಬಗ್ಗೆ ತಪಾಸಣೆ ಮಾಡಿಸಿದ್ದಾರೆ. ಆದರೆ ಆಸ್ಪತ್ರೆ ವೈಧ್ಯರು ಶಾಲಿನಿ ಕುಡಿದಿಲ್ಲವೆಂದು ವರದಿ ನೀಡಿದ್ದಾರೆ.
ಕಾರು ಚಾಲಕಿ ಶಾಲಿನಿ ಬೆಂಗಳೂರಿನ ಇನ್ಫೆಂಟ್ರಿ ರೋಡ್ ನಿವಾಸಿಯಾಗಿದ್ದು, ಇಂದು ರಾತ್ರಿ ಪಾರ್ಟಿ ಮುಗಿಸಿ ತನ್ನ ಸ್ನೇಹಿತೆಯರೊಂದಿಗೆ ವಾಪಸಾಗುತ್ತಿದ್ದಳು. ಬೌರಿಂಗ್ ಆಸ್ಪತ್ರೆಯ ವೈಧ್ಯರು ಶಾಲಿನಿ ಕುಡಿದಿಲ್ಲವೆಂದು ಸುಳ್ಳು ವರದಿ ನೀಡಿದ್ದಾರೆ ಅಂತಾ ಅಪಘಾತಕ್ಕೊಳಗಾದ ಓಲಾದ ಸ್ವಿಫ್ಟ್ ಕಾರು ಚಾಲಕ ಆರೋಪಿಸಿದ್ದಾನೆ.
ಇನ್ನು ಈ ಸಂಬಂಧ ಆರ್.ಟಿ.ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
