ಎಸಿಬಿ ಮೂಲಗಳ ಪ್ರಕಾರ, ರಂಗನಾಥ್ ನಾಯಕ್ ಮನೆಯಲ್ಲಿ ಬರೋಬ್ಬರಿ 20 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ. ಕೆಜಿ ಗಟ್ಟಲೆ ಚಿನ್ನ, ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳು ಸಿಕ್ಕಿವೆ.
ಮೈಸೂರು(ಮಾ. 03): ಕಳೆದ ಕೆಲ ದಿನಗಳಿಂದ ಎಸಿಬಿ ಅಧಿಕಾರಿಗಳು ರಾಜ್ಯದ ಭ್ರಷ್ಟ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ. ಇವತ್ತು ಮೈಸೂರಿನಲ್ಲೂ ಬೆಳ್ಳಂಬೆಳಗ್ಗೆ ದೊಡ್ಡ ಮಿಕವೊಂದನ್ನು ಬಲೆಗೆ ಕೆಡವಿದ್ದಾರೆ. ಮೈಸೂರಿನಲ್ಲಿ ಲೋಕೋಪಯೋಗಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿರುವ ಜಿ. ರಂಗನಾಥ್ ನಾಯಕ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿಜಯನಗರದ ಒಂದನೇ ಹಂತದಲ್ಲಿರುವ ಮಾನಸ ಅಪಾರ್ಟ್ಮಂಟ್ ಮೇಲೆ ಎಸಿಬಿ ಅಧಿಕಾರಿಗಳು ಮುಂಜಾನೆ 6 ಗಂಟೆಗೆ ದಾಳಿ ಮಾಡಿದ್ರು. ಕೋಟಿಗೂ ಅಧಿಕ ಮೌಲ್ಯದ ಆದಾಯ ಸಿಕ್ಕಿದ್ದು, ಪರಿಶೀಲನೆಯನ್ನು ಮುಂದುವರೆಸಿದ್ದಾರೆ. ಎಸಿಬಿ ಮೂಲಗಳ ಪ್ರಕಾರ, ರಂಗನಾಥ್ ನಾಯಕ್ ಮನೆಯಲ್ಲಿ ಬರೋಬ್ಬರಿ 20 ಕೋಟಿ ಮೌಲ್ಯದ ಆದಾಯ ಪತ್ತೆಯಾಗಿದೆ. ಕೆಜಿ ಗಟ್ಟಲೆ ಚಿನ್ನ, ಬೆಳ್ಳಿ ಮೊದಲಾದ ಅಮೂಲ್ಯ ವಸ್ತುಗಳು ಸಿಕ್ಕಿವೆ. ಸೂಪರಿಂಟೆಂಡೆಂಟ್ ಎಂಜಿನಿಯರ್ ಮನೆಯಲ್ಲಿ ಇಷ್ಟು ಪ್ರಮಾಣದ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದರೆನ್ನಲಾಗಿದೆ.
