ಆದರೆ ಸೂಲಿಬೆಲೆ ಬರದಂತೆ ಎನ್ಎಸ್'ಯುಐ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸಿದ್ದರು. ಹೀಗಾಗಿ ಎಬಿವಿಪಿ ಕಾರ್ಯಕರ್ತರು ಹಾಗೂ ಎನ್'ಎಸ್'ಯುಐ  ಕಾರ್ಯಕರ್ತರ ನಡುವೆ ಜಗಳವಾಗಿತ್ತು.

ಚಿಕ್ಕಮಗಳೂರು(ಜ.11): ನೇಣು ಬಿಗಿದು ಕೊಂಡು ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜನವರಿ 7ರಂದು ಶೃಂಗೇರಿಯಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಸಮಾರಂಭಕ್ಕೆ ಚಕ್ರವರ್ತಿ ಸೂಲಿಬೆಲೆ ಬರಬೇಕಿತ್ತು. ಆದರೆ ಸೂಲಿಬೆಲೆ ಬರದಂತೆ ಎನ್ಎಸ್'ಯುಐ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸಿದ್ದರು. ಹೀಗಾಗಿ ಎಬಿವಿಪಿ ಕಾರ್ಯಕರ್ತರು ಹಾಗೂ ಎನ್'ಎಸ್'ಯುಐ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಗಲಾಟೆ ಸಂಬಂಧ ಎಬಿವಿಪಿಯ 4 ಕಾರ್ಯಕರ್ತರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆ ನಾಲ್ವರಲ್ಲಿ ಅಭಿಷೇಕ್​ ಕೂಡ ಒಬ್ಬನಾಗಿದ್ದ. ಹೀಗಾಗಿ ತನ್ನ ಜೀವನ​ ಹಾಳಾಯ್ತು ಅಂತಾ ಡೆಟ್​ನೋಟ್​ ಬರೆದಿಟ್ಟು ಯುವಕ ಅಭಿಷೇಕ್​ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಶೃಂಗೇರಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಇನ್ನು ಘಟನೆ ಖಂಡಿಸಿ ಶೃಂಗೇರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.