ಗುರ್ ಮೆಹರ್ ಹೇಳಿಕೆಯು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ದೇಶದಾದ್ಯಂತ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೇವಾಲಾ ಎಬಿವಿಪಿ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಣಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ಇವರು ಹೊಣೆಗೇಡಿಗಳು ಎಂದು ಬಣ್ಣಿಸಿದ್ದಾರೆ.

ನವದೆಹಲಿ (ಫೆ.28): ಗುರ್ ಮೆಹರ್ ಹೇಳಿಕೆಯು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ದೇಶದಾದ್ಯಂತ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೇವಾಲಾ ಎಬಿವಿಪಿ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಣಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ಇವರು ಹೊಣೆಗೇಡಿಗಳು ಎಂದು ಬಣ್ಣಿಸಿದ್ದಾರೆ.

ಮೋದಿ ಸರ್ಕಾರವು ನೋಟ್ ಬಂಧಿಯ (ನೋಟು ನಿಷೇಧ) ಬಳಿಕ ಜುಬಾನ್ ಬಂಧಿ (ಅಭಿವ್ಯಕ್ತಿ ಸ್ವಾತಂತ್ರ) ಯನ್ನು ಜನರ ಮೇಲೆ ಹೇರುತ್ತಿದೆ. ಜನರ ಯೋಚನಾ ಶಕ್ತಿಯನ್ನು ಕಸಿದುಕೊಳ್ಳುತ್ತಿದೆ. ಈ ದೇಶದಲ್ಲಿ ನಿಮಗೆ ಬದುಕುವ ಹಕ್ಕಿಲ್ಲ ಎಂದು ಬಿಜೆಪಿ ಹೇಳುವ ದಿನ ದೂರವಿಲ್ಲ. ನೀವು ಈ ಸರ್ಕಾರಕ್ಕೆ ಬದ್ಧವಾಗಿದ್ದರೆ ಮಾತ್ರ ಆ ದಿನಗಳು ಬರುವುದಿಲ್ಲ ಎಂದು ಸರ್ಜೇವಾಲಾ ಟೀಕಿಸಿದ್ದಾರೆ.

20 ವರ್ಷದ ಈ ಹುಡುಗಿ ಎಬಿವಿಪಿಯ ಗೂಂಡಾಗಿರಿಯನ್ನು ಖಂಡಿಸಿದ್ದಕ್ಕಾಗಿ ಅತ್ಯಾಚಾರ, ಕೊಲೆಯ ಬೆದರಿಕೆಯನ್ನು ಹಾಕಲಾಗಿದೆ. ಈಕೆಯ ಪರ ಯಾಕೆ ಯಾರೂ ಎದ್ದು ನಿಲ್ಲುತ್ತಿಲ್ಲ? ಬಿಜೆಪಿ ಅಥವಾ ಎಬಿವಿಪಿಯನ್ನು ಯಾರೂ ಯಾಕೆ ಖಂಡಿಸುತ್ತಿಲ್ಲ? ಗೂಂಡಾಗಿರಿಯನ್ನು ಸಹಿಸಿಕೊಳ್ಳಬೇಕೇ? ಎಂದು ಪ್ರಶ್ನಿಸಿದ್ದಾರೆ.