೨೬ರ ಹರೆಯದ ಯುವತಿಯೊಬ್ಬಳನ್ನು ವಿವಾಹವಾಗಲು ಸಲೇಂ ಒಪ್ಪಿದ್ದು, ಈ ಸಂಬಂಧ ಅನುಮತಿ ಕೋರಿ ಯುವತಿ ಈಗಾಗಲೇ ಟಾಡಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಮುಂಬೈ(ಜು.18): ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತ ಭೂಗತ ಪಾತಕಿ ಅಬು ಸಲೇಂ, ತಾನು ವಿವಾಹವಾಗುತ್ತಿದ್ದು, ಇದಕ್ಕಾಗಿ ಪರೋಲ್ ನೀಡುವಂತೆ ಕೋರಿ ಮುಂಬೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾನೆ. 26ರ ಹರೆಯದ ಯುವತಿಯೊಬ್ಬಳನ್ನು ವಿವಾಹವಾಗಲು ಸಲೇಂ ಒಪ್ಪಿದ್ದು, ಈ ಸಂಬಂಧ ಅನುಮತಿ ಕೋರಿ ಯುವತಿ ಈಗಾಗಲೇ ಟಾಡಾ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಸಲೇಂ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ, ಕೋರ್ಟ್ ಸಿಬಿಐಗೆ ಸೂಚಿಸಿದೆ. ವಿಚಾರಣೆಗಾಗಿ ಲಖನೌಗೆ ರೈಲಿನಲ್ಲಿ ಕರೆದೊಯ್ಯುವ ವೇಳೆ ಸಲೇಂಗೆ ಯುವತಿಯೊಬ್ಬಳ ಜೊತೆ ಲವ್ ಆಗಿತ್ತು. ಬಳಿಕ ಇಬ್ಬರೂ ಫೋನ್‌ನಲ್ಲೇ ವಿವಾಹವಾಗಿದ್ದರಂತೆ. ಇದೀಗ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗಲು ಸಲೇಂ ಅನುಮತಿ ಕೋರಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred