ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಯತ್ನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಉಮಾಕಾಂತ್​ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಪ್ರಶಾಂತ್​ನ ಬಂಟ ಉಮಾಕಾಂತ್, ಯಡಿಯೂರಪ್ಪ ಪಿಎ ಸಂತೋಷ ಜತೆ ಸಂಪರ್ಕದಲ್ಲಿದ್ದನು. ಯಡಿಯೂರಪ್ಪ ನಿವಾಸದ ಡಾಲರ್ಸ್ ಕಾಲೋನಿಯಲ್ಲಿ ಸಂತೋಷ್ ಹಾಗೂ ಉಮಾಕಾಂತ್ ಭೇಟಿಯಾಗಿದ್ದರು.

ಬೆಂಗಳೂರು: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಕಿಡ್ನಾಪ್ ಯತ್ನ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಉಮಾಕಾಂತ್​ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಪ್ರಶಾಂತ್​ನ ಬಂಟ ಉಮಾಕಾಂತ್, ಯಡಿಯೂರಪ್ಪ ಪಿಎ ಸಂತೋಷ ಜತೆ ಸಂಪರ್ಕದಲ್ಲಿದ್ದನು. ಯಡಿಯೂರಪ್ಪ ನಿವಾಸದ ಡಾಲರ್ಸ್ ಕಾಲೋನಿಯಲ್ಲಿ ಸಂತೋಷ್ ಹಾಗೂ ಉಮಾಕಾಂತ್ ಭೇಟಿಯಾಗಿದ್ದರು.

ಈ ಹಿಂದೆ ಹಲ್ಲೆಗೊಳಗಾದ ವಿನಯ್-ಉಮಾಕಾಂತ್ ಬಗ್ಗೆ ಪ್ರಸ್ತಾಪಿಸಿದ್ರು. ಉಮಾಕಾಂತ್’ನನ್ನು ಕೋರಮಂಗಲ ಪೊಲೀಸರು ವಿಚಾರಣೆ ನಡೆಸಿದಾಗ ಎರಡು ಬಾರಿ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿ ಮನೆಯಲ್ಲಿ ಸಂತೋಷ್’​​ನನ್ನು ಭೇಟಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಸದ್ಯ ಮಹಾಲಕ್ಷ್ಮೀ ಲೇ ಔಟ್ ಪೊಲೀಸರು ಉಮಾಕಾಂತ್​ನನ್ನು ಹೆಚ್ಚಿನ ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದಾರೆ.