ಬಾಸಿತ್ ಅವರು ಪಾಕಿಸ್ತಾನಕ್ಕೆ ಮರಳಿದ ಬಳಿಕ ಭಾರತಕ್ಕೆ ನೂತನ ಹೈಕಮಿಷನರ್ ನಿಯೋಜಿಸಲು ಪಾಕ್ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಇಸ್ಲಾಮಾಬಾದ್(ಫೆ.04): ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಪಾಕಿಸ್ತಾನದ ನೂತನ ವಿದೇಶಾಂಗ ಕಾರ್ಯದರ್ಶಿ ಆಗುವುದು ಬಹುತೇಕ ಖಚಿತವಾಗಿದೆ.
ಅಜೀಜ್ ಅಹಮದ್ ಚೌಧರಿ ಅವರನ್ನು ಬದಲಾಯಿಸಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಯಲ್ಲಿ ಅನುಭವ ಹೊಂದಿರುವ ಬಾಸಿತ್'ರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲು ಪ್ರಧಾನಿ ನವಾಜ್ ಷರೀಫ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮುಂದಿನ ವಾರ ಬಾಸಿತ್ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ಬಾಸಿತ್ ಅವರು ಪಾಕಿಸ್ತಾನಕ್ಕೆ ಮರಳಿದ ಬಳಿಕ ಭಾರತಕ್ಕೆ ನೂತನ ಹೈಕಮಿಷನರ್ ನಿಯೋಜಿಸಲು ಪಾಕ್ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಅಜೀಜ್ ಅಹಮದ್'ರನ್ನು ಅಮೆರಿಕದಲ್ಲಿನ ಪಾಕಿಸ್ತಾನ ರಾಯಭಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
