ಪಾದ್ರಿ ಟಾಮ್‌ ಉಳುನ್ನಲಿಲ್‌ ಸಹಾಯಕ್ಕಾಗಿ ಯಾಚಿಸಿರುವ ವಿಡಿಯೊವೊಂದನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿದೆ.
ಈ ವಿಡಿಯೋದಲ್ಲಿ ಉಳುನ್ನಲಿಲ್ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಹಾಯ ಬೇಕು ಎಂದು ಯಾಚಿಸಿದ್ದಾರೆ.
ಅಪಹರಣಕಾರರು ಭಾರತೀಯ ಸರ್ಕಾರ, ಯುಎಇಯ ಅಬುಧಾಬಿಯ ಕ್ಯಾಥೊಲಿಕ್ ಬಿಷಪ್ರನ್ನು ಸಂಪರ್ಕಿಸಿ ತಮ್ಮ ಬೇಡಿಕೆಯನ್ನಿರಿಸಿದ್ದಾರೆ, ಆದರೆ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಉಳುನ್ನಲಿಲ್ ಹೇಳಿದ್ದಾರೆ.
