ಕಾಶ್ಮೀರದ ಶೋಪಿಯಾನ್‌ನಲ್ಲಿ ಯೋಧ ಔರಂಗಜೇಬ್ ಅವರನ್ನು ಅಪಹರಣಗೈದು ಹತ್ಯೆಗೈದ ಉಗ್ರರನ್ನು 3 ದಿನಗಳಲ್ಲಿ ಪತ್ತೆ ಹಚ್ಚಿ ಕೊಲ್ಲಬೇಕು ಎಂದು ಹುತಾತ್ಮ ಯೋಧನ ತಂದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಜಮ್ಮು: ಕಾಶ್ಮೀರದ ಶೋಪಿಯಾನ್‌ನಲ್ಲಿ ಯೋಧ ಔರಂಗಜೇಬ್ ಅವರನ್ನು ಅಪಹರಣಗೈದು ಹತ್ಯೆಗೈದ ಉಗ್ರರನ್ನು 3 ದಿನಗಳಲ್ಲಿ ಪತ್ತೆ ಹಚ್ಚಿ ಕೊಲ್ಲಬೇಕು ಎಂದು ಹುತಾತ್ಮ ಯೋಧನ ತಂದೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಯೋಧ ಔರಂಗಜೇಬ್ ಅವರ ದುಃಖತಪ್ತ ತಂದೆ, ನನ್ನ ಮಗನ ಪುತ್ರನ ಸಾವಿಗೆ ಕಾರಣರಾದವರನ್ನು ಶಿಕ್ಷಿಸಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ. ಮುಂದಿನ 72 ಗಂಟೆಯಲ್ಲಿ ನನ್ನ ಮಗನ ಕೊಂದವರನ್ನು ಸರ್ಕಾರ ಪತ್ತೆ ಹಚ್ಚಿ ಕೊಲ್ಲದಿದ್ದರೆ, ನನ್ನ ಮಗನ ಸಾವಿಗೆ ನಾನೇ ಸೇಡು ತೀರಿಸಿಕೊಳ್ಳುವುದಾಗಿ,’ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾದ ಯೋಧರ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವ ಮತ್ತು ಪ್ರತ್ಯೇಕತಾವಾದಿ ಮುಖಂಡರ ಕಾಶ್ಮೀರದಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಔರಂಗಜೇಬ್ ಸಾವು ಕೇವಲ ನಮ್ಮ ಕುಟುಂಬಕ್ಕೆ ಆಗಿರುವ ನಷ್ಟವಲ್ಲ. ಬದಲಿಗೆ ಭಾರತದ ಸೇನೆ ಮತ್ತು ಜಮ್ಮು-ಕಾಶ್ಮೀರಕ್ಕೆ ಆಗಿರುವ ನಷ್ಟಎಂದು ಅವರು ಕಣ್ಣೀರು ಹಾಕಿದರು.

Last Updated 16, Jun 2018, 9:36 AM IST